ADVERTISEMENT

ಅಗ್ಗದ `ಲ್ಯಾಟರೇಟ್ ಇಟ್ಟಿಗೆ' ಮನೆ

ವಿ.ಬಾಲಕೃಷ್ಣ ಶಿರ್ವ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಮಂಗಳೂರಿನ ಕಾಪಿಕಾಡ್‌ಬಿಜೈ ರಸ್ತೆಯಲ್ಲಿ ಮುಂದೆ ಸಾಗಿದರೆ ಅಲ್ಲಿರುವ ಶಾಲೆಯೊಂದರ ಮುಂಭಾಗದಲ್ಲೊಂದು ಸಣ್ಣ ರಸ್ತೆ. ಅದರ ಕೊನೆಗೆ ಬಹಳ ವೈಶಿಷ್ಟ್ಯಪೂರ್ಣವಾದ ಮನೆ. ಪ್ರಭಾಕರ ಥಾಕೂರ್ ಮತ್ತು ಲೀನಾ ದಂಪತಿಯ ಕನಸಿನ ಮನೆ ಹೆಸರು `ಹರಿ ಓಂ'.

ಈ ಮನೆಯ ಹೆಚ್ಚಿನ ಭಾಗವನ್ನು  ಸಂಪೂರ್ಣವಾಗಿ ಲ್ಯಾಟರೇಟ್ ಇಟ್ಟಿಗೆಯಿಂದಲೇ ಕಟ್ಟಲಾಗಿದೆ. ಈ ಇಟ್ಟಿಗೆಗಳು ಇತರೆ ಭಾಗದಲ್ಲಿ ಬಳಕೆ ಆಗುವಂತಹ, ಮಣ್ಣು ಕಲಸಿ ಅಚ್ಚುಹಾಕಿ ಬೇಯಿಸಿದ ಇಟ್ಟಿಗೆಗಳಂತಹವಲ್ಲ. ಈ ಲ್ಯಾಟರೇಟ್ ಇಟ್ಟಿಗೆಗಳನ್ನು ಭೂಮಿಯಿಂದ ಅಗೆದು ದೊಡ್ಡ ಆಕಾರಕ್ಕೆ ಕತ್ತರಿಸಿ ತೆಗೆದು ಹಾಗೆಯೇ ನೇರವಾಗಿ ಬಳಸಲಾಗುತ್ತದೆ. ಇವು ಗಾತ್ರದಲ್ಲಿ ಅಚ್ಚು ಹಾಕಿ ಬೇಯಿಸಿದ ಸಾಂಪ್ರದಾಯಿಕ ಶೈಲಿಯ 8 ಇಟ್ಟಿಗೆಗಳಿಗೆ ಸಮವಾಗುತ್ತವೆ. ಬಹಳ ತೂಕದವೂ ಆಗಿರುತ್ತವೆ.

ಈ ಮನೆಗೆ ಬಂಡೆಕಲ್ಲಿನಿಂದಲೇ ತಳಪಾಯ ಹಾಕಲಾಗಿದೆ. ಫಿಲ್ಲರ್ ಸ್ಲ್ಯಾಬ್ಲ್ ಹಾಕಲಾಗಿದ್ದು, ಮೇಲ್ಛಾವಣಿಗೆ ಕ್ಲೇ ಬ್ರಿಕ್ಸ್ ಮಾದರಿಯ ಮಧ್ಯೆ ಟೊಳ್ಳಾದ ಕೆಂಪು ಇಟ್ಟಿಗೆಗಳನ್ನೇ ಬಳಸಲಾಗಿದೆ. ಹಾಗಾಗಿ ಯಾವುದೇ ಹವಾನಿಯಂತ್ರಣದ ಯಂತ್ರದ ನೆರವಿಲ್ಲದೆ ಇಡೀ ಮನೆ ತಂಪಾಗಿದೆ.

ಒಟ್ಟಾರೆ ಮನೆ 12 ಅಡಿ-22 ಅಡಿ  ವಿಸ್ತೀರ್ಣವಿದೆ. ಹಜಾರ ಮತ್ತು ಮೂರು ಕೊಠಡಿಗಳ ನೆಲಕ್ಕೆ `ವಿಟ್ರಿಫೈಡ್ ಟೈಲ್ಸ್' ಬಳಸಲಾಗಿದೆ. ಮುಂದಿನ ಮುಖ್ಯ ಬಾಗಿಲಿಗೆ ಮಾತ್ರ ಮರ ಬಳಸಲಾಗಿದೆ. ಎಲ್ಲಾ ಕಿಟಕಿಗಳಿಗೂ ಅಲ್ಯುಮಿನಿಯಂ ಸ್ಲೈಡಿಂಗ್ ಬಳಸಿದೆ. ಒಳಗೆ ಇಟ್ಟಿಗೆಯಿಂದಲೇ ನಿಮಿಸಿದ ಕಮಾನು ಬಹಳ ಆಕರ್ಷಕವಾಗಿದೆ. ಓಪನ್ ಕಿಚನ್ `ಎಲ್' ಆಕಾರದಲ್ಲದೆ. ಇಲ್ಲಿನ ಕಪಾಟುಗಳು ಸಿಮೆಂಟಿನಿಂದಲೇ ಮಾಡಲಾಗಿದೆ.

ಊಟದ ಕೋಣೆಯೂ ಪ್ರತ್ಯೇಕವಾಗಿದೆ. ಅಡುಗೆ ಮನೆಗೆ ಶಹಾಬಾದ್ ಸ್ಟೋನ್ ಹಾಕಲಾಗಿದೆ. ಇದೂ ಕೂಡ ನಯವಾಗಿದ್ದು, ಅತ್ಯಾಧುನಿಕ ಟೈಲ್ಸ್‌ನಂತೆಯೇ ಕಾಣಿಸುತ್ತದೆ. ಆದರೆ ತುಂಬಾ ಮಿತವ್ಯಯವಾದದ್ದು, ಮಹಡಿಗೆ ಹೋಗುವ ಮೆಟ್ಟಿಲುಗಳಿಗೂ ಶಹಾಬಾದ್ (ಮಹಾರಾಷ್ಟ್ರದಲ್ಲಿ ಬಹಳಷ್ಟು ಬಳಕೆಯಲ್ಲಿದ್ದು) ಟೈಲ್ಸ್ ಹಾಕಲಾಗಿದೆ.

ಇದೇ ಕಾರಣದಿಂದಾಗಿ 2004ರಲ್ಲಿ ನಿರ್ಮಿಸಿದಾಗ ಈ ಮನೆಗೆ ಕೇವಲ ರೂ. 8 ಲಕ್ಷ ಖರ್ಚಾಗಿದೆ. ಈಗಲಾದರೆ ರೂ. 12 ಲಕ್ಷ ವೆಚ್ಚವಾಗಬಹುದು.

ಇದು ಥಾಕೂರ್ ದಂಪತಿ ಮತ್ತು `ವಾಸ್ತುಶಿಲ್ಪಿ' ರಾಜೇಂದ್ರ ಕಲ್ಬಾವಿ ಅವರ ಕಲ್ಪನೆಯಿಂದ ಮೂಡಿ ಬಂದಿದೆ. ಲೀನಾ ಥಾಕೂರ್  ಮೊ: 9482100110.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT