ADVERTISEMENT

ನೀವು ಹೀಗೆ ಮಾಡಿದ್ರಾ?

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST
ನೀವು ಹೀಗೆ ಮಾಡಿದ್ರಾ?
ನೀವು ಹೀಗೆ ಮಾಡಿದ್ರಾ?   

ಮಣ್ಣಿನ ಗಂಧ, ಚಿಗುರೆಲೆಗಳ ಸೌಂದರ್ಯ ಆಸ್ವಾದಿಸುವುದು ಎಲ್ಲರಿಗೂ ಇಷ್ಟ. ಹೂಗಿಡಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಆದರೆ ಗಿಡ ಬೆಳೆಸುವ ಪ್ರಕ್ರಿಯೆಯಲ್ಲಿ ಮಾಡುವ ಕೆಲ ಚಿಕ್ಕಪುಟ್ಟ ತಪ್ಪುಗಳು ಗಿಡಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಜೊತೆಗೆ ಕೈತೋಟ ಬೆಳೆಯುವ ನಿಮ್ಮ ಆಸೆಯನ್ನೂ ಮಂಕಾಗಿಸಬಹುದು.

* ಅತಿ/ ಕಡಿಮೆ ಬೆಳಕು: ಗಿಡಗಳ ಬೆಳವಣಿಗೆಗೆ ಬೆಳಕು ಅತಿಮುಖ್ಯ. ಆದರೆ ಯಾವ ಗಿಡಕ್ಕೆ ಬೆಳಕಿನ ಅವಶ್ಯಕತೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಹೀಗಾಗಿ ಈ ಗಿಡ ಬಾಲ್ಕನಿಯಲ್ಲಿ ಬೆಳೆಸಲು ಸೂಕ್ತವೇ ಎನ್ನುವುದನ್ನು ತಿಳಿದುಕೊಳ್ಳಬೇಕು.

ಹೆಚ್ಚಿನ ಹೂವಿನ ಗಿಡಗಳು ಚೆನ್ನಾಗಿ ಬೆಳೆಯಲು ದಿನವಿಡೀ ಸೂರ್ಯನ ಬೆಳಕು ಬೇಕು. ಇಲ್ಲವೇ ಕನಿಷ್ಠ 4–6 ಗಂಟೆಗಳಾದರೂ ಸೂರ್ಯನ ಬೆಳಕು ಸಿಗಬೇಕು. ತರಕಾರಿ ಬೆಳೆಯುವುದಿದ್ದರೆ ದಕ್ಷಿಣ, ಪಶ್ಚಿಮ ಇಲ್ಲವೇ ಪೂರ್ವ ದಿಕ್ಕಿನಲ್ಲಿರುವ ಬಾಲ್ಕನಿ ಸೂಕ್ತ.

ADVERTISEMENT

* ಗಿಡಕ್ಕೆ ನೀರುಣಿಸುವುದು: ಗಿಡಗಳಿಗೆ ಅತಿಯಾಗಿ ನೀರುಣಿಸುವುದೂ ಒಳ್ಳೆಯದಲ್ಲ. ಪಾಟ್‌ನಲ್ಲಿ ಬೆಳೆಸಲಾದ ಗಿಡಗಳಿಗೆ ಸ್ವಲ್ಪ ಸ್ವಲ್ಪ ನೀರು ಹನಿಸಿದರೆ ಸಾಕು. ಪಾಟ್‌ಗಳಲ್ಲಿ ಹೆಚ್ಚಾದ ನೀರು ಹೊರ ಹೋಗುವಂತೆ ಚಿಕ್ಕದಾದ ರಂಧ್ರ ಇರುವುದು ಕಡ್ಡಾಯ.

ನೀರುಣಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.  ಆಟೊಮ್ಯಾಟಿಕ್‌ ಹನಿ ನೀರಾವರಿ ಪದ್ಧತಿ ಅಥವಾ ಬಾಟಲ್‌ ಒಂದರಲ್ಲಿ ಚಿಕ್ಕ ಚಿಕ್ಕದಾದ ರಂಧ್ರ ಮಾಡಿ ನೀರು ನಿಧಾನವಾಗಿ ತೊಟ್ಟಿಕ್ಕುವಂತೆ ಮಾಡಲೂಬಹುದು.

* ನೀರೊಂದೇ ಅಲ್ಲ: ಗಿಡಕ್ಕೆ ನೀರಷ್ಟೇ ಅಲ್ಲ, ಮಣ್ಣಿನಿಂದ 16 ಬಗೆಯ ಪೋಷಕಾಂಶಗಳು ಅವುಗಳಿಗೆ ಬೇಕಾಗುತ್ತವೆ. ಗೊಬ್ಬರವನ್ನು ಕನಿಷ್ಠ 15 ದಿನಕ್ಕೊಮ್ಮೆಯಾದರೂ ಗಿಡಗಳಿಗೆ ಹಾಕಿ.

*  ಹಸಿರು ತುಂಬಿಸುವ ಆತುರದಲ್ಲಿ ಒಂದೇ ಜಾಗದಲ್ಲಿ ತುಂಬಾ ಗಿಡಗಳನ್ನು ಬೆಳೆಸುವುದೂ ಸರಿಯಲ್ಲ. ಗಿಡದಿಂದ ಗಿಡಕ್ಕೆ ಸ್ಥಳಾವಕಾಶ ಇರಬೇಕು.  

* ಗಿಡಗಳನ್ನು ನೆಡುವಾಗ ಅವುಗಳಿಗೆ ಸರಿ ಹೊಂದಬಹುದಾದ ಗಾತ್ರದ ಪಾಟ್‌ಗಳನ್ನೇ ಆಯ್ದುಕೊಳ್ಳಿ. ಪ್ರತಿ ತಿಂಗಳು ಅವುಗಳನ್ನು ಪರೀಕ್ಷಿಸಿ ಅಗತ್ಯವಿದ್ದಲ್ಲಿ ಬೇರೆ ಪಾಟ್‌ಗೆ ಅದನ್ನು ಬದಲಾಯಿಸಿ.

* ಗಿಡಗಳೊಂದಿಗೆ ಅನಾಯಾಸವಾಗಿ ಬೆಳೆಯುವ ಕಳೆಗಳನ್ನು ತೆಗೆಯುತ್ತಲಿರಬೇಕು. ಹುಳು ಹುಪ್ಪಡಿಗಳು  ಗಿಡಗಳನ್ನು ಹಾಳು ಮಾಡದಂತೆ ಎಚ್ಚರಿಕೆ ವಹಿಸಬೇಕು.

* ಯಾವ ಗಿಡ ಯಾವ ಕಾಲದಲ್ಲಿ ಬೆಳೆಯುತ್ತವೆ ಎಂಬುದನ್ನು ತಿಳಿದುಕೊಂಡು ಅವುಗಳನ್ನು ಬೆಳೆಯಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.