ADVERTISEMENT

ನೀವೇ ಮಾಡಿ ಕೈತೋಟದ ಸಲಕರಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST
ನೀವೇ ಮಾಡಿ ಕೈತೋಟದ ಸಲಕರಣೆ
ನೀವೇ ಮಾಡಿ ಕೈತೋಟದ ಸಲಕರಣೆ   

ಕೈತೋಟವನ್ನು ಸ್ಚಚ್ಛ, ಅಂದವಾಗಿ ಕಾಣುವಂತೆ ಮಾಡುವುದು ಸುಲಭದ ಕೆಲಸವಲ್ಲ. ಪುಟ್ಟ ತೋಟದ ಆರೈಕೆಯನ್ನು ಕೈಯಲ್ಲಿ ಮಾಡುವುದಕ್ಕಿಂತ, ಅದಕ್ಕಾಗಿಯೇ ಇರುವ ಸಲಕರಣೆಯ ಮೂಲಕ ಮಾಡುವುದು ಹೆಚ್ಚು ಉಪಯುಕ್ತ. ಆದರೆ ಈ ಸಲಕರಣೆಗಳ ಬೆಲೆ ದುಬಾರಿ ಎನಿಸಿ ಸುಮ್ಮನಾಗುವವರು, ಮನೆಯಲ್ಲಿಯೇ ಅನಾವಶ್ಯಕ ಎನಿಸಿರುವ ವಸ್ತುಗಳಿಂದಲೇ ಸಲಕರಣೆಗಳನ್ನು ಮಾಡಿಕೊಳ್ಳಬಹುದು. ಹೇಗೆ ಎನ್ನುತ್ತೀರಾ, ಇಲ್ಲಿದೆ ಮಾಹಿತಿ.

* ದೊಡ್ಡ ಬಾಟಲಿಯ ತಳಭಾಗ ಕತ್ತರಿಸಿ. ಮೇಲಿನ ಭಾಗ ಹಾಗೆಯೇ ಇರಲಿ. ಒಂದು ಅಂಚನ್ನು ಗುರುತು ಹಾಕಿಕೊಂಡು ಕತ್ತರಿಸಿಕೊಳ್ಳಿ. ಈಗ ಹ್ಯಾಂಡಲ್‌ ಆಕಾರಕ್ಕೆ ಬಂದ ಸಲಕರಣೆಯಿಂದ ಮಣ್ಣನ್ನು ಕುಂಡಕ್ಕೆ ಸುಲಭವಾಗಿ ತುಂಬಬಹುದು. ಮುಚ್ಚಳದ ಭಾಗಕ್ಕೆ ದಪ್ಪ ಕೋಲನ್ನು ಸಿಕ್ಕಿಸುವುದರಿಂದ ಮಣ್ಣನ್ನು ಹದ ಮಾಡಲು ಇದನ್ನು ಬಳಸಬಹುದು.

* ದೊಡ್ಡ ಎಣ್ಣೆಯ ಬಾಟಲಿಯ ತಳಭಾಗವನ್ನು ಕತ್ತರಿಸಿ. ಅದರ ಮುಚ್ಚಳವನ್ನು ಪಿನ್ನಿನಿಂದ ತೂತು ಮಾಡಿ. ಈಗ ಮುಚ್ಚಳದ ಭಾಗವನ್ನು ಮಗುಚಿ ಕುಂಡದಲ್ಲಿ ಇರಿಸಿ, ನೀರು ಹಾಕಿ. ಹನಿ, ಹನಿಯಾಗಿ ನೀರು ಮಣ್ಣನ್ನು ಸೇರುತ್ತದೆ.

ADVERTISEMENT

* ಸ್ಪ್ರೇ ಬಾಟಲಿಯನ್ನು ಮಾಡುವುದು ತುಂಬಾ ಸುಲಭ. ಎಣ್ಣೆಯ ಬಾಟಲಿಯ ತಳಭಾಗವನ್ನು ಪಿನ್ನಿನಿಂದ ತೂತು ಮಾಡಿದರಾಯಿತು. ಹನಿಹನಿಯಾಗಿ ಬರುವ ನೀರನ್ನು ಗಿಡಗಳಿಗೆ ಉಣಿಸಬಹುದು.

* ಸೂರ್ಯನ ಕಿರಣಗಳನ್ನು ಹೆಚ್ಚು ಬೇಡದ ಗಿಡಗಳಿಗೆ ಹಸಿರು ಹೊದಿಕೆಯನ್ನು ಬಾಟಲಿಗಳಿಂದ ಮಾಡಬಹುದು. ಬಾಟಲಿಯನ್ನು ಸಮ ಅರ್ಧಭಾಗ ಮಾಡಿ, ಮುಚ್ಚಳ ತೆಗೆದು ಆ ಭಾಗವನ್ನು ಗಿಡಗಳಿಗೆ ಮುಚ್ಚಿ.

ವಿಡಿಯೊ ನೋಡಲು: bit.*y/2yFKX*J

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.