ADVERTISEMENT

ಕೋಡಗನ ಕೋಳಿ ನುಂಗಿತ್ತ ಚಿತ್ರದ 'ರಿಂಗಣ ರಿಂಗಣ ನೋಟ'ದಲ್ಲಿ 'ಕಶ್ಮೀರ್ ಕಿ ಕಲೀ'

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2017, 12:13 IST
Last Updated 26 ಏಪ್ರಿಲ್ 2017, 12:13 IST
ಕೋಡಗನ ಕೋಳಿ ನುಂಗಿತ್ತ ಚಿತ್ರದ 'ರಿಂಗಣ ರಿಂಗಣ ನೋಟ'ದಲ್ಲಿ 'ಕಶ್ಮೀರ್ ಕಿ ಕಲೀ'
ಕೋಡಗನ ಕೋಳಿ ನುಂಗಿತ್ತ ಚಿತ್ರದ 'ರಿಂಗಣ ರಿಂಗಣ ನೋಟ'ದಲ್ಲಿ 'ಕಶ್ಮೀರ್ ಕಿ ಕಲೀ'   

ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಚಿತ್ರಗಳಿಂದ ಸ್ಫೂರ್ತಿ ಪಡೆದ ಹಾಡುಗಳ ಪಟ್ಟಿಯಲ್ಲಿ 'ಕೋಡಗನ ಕೋಳಿ ನುಂಗಿತ್ತ' ಚಿತ್ರದ ಹಾಡು ಕೂಡಾ ಇದೆ. 'ಮಲ್ಲೇಶ್ವರಿ' ಎಂಬ ತೆಲುಗು ಚಿತ್ರದ ರಿಮೇಕ್ ಆಗಿರುವ ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ಪೂಜಾಗಾಂಧಿ ನಾಯಕ- ನಾಯಕಿಯರು.

ಈ ಚಿತ್ರದಲ್ಲಿ 'ಈ ರಿಂಗಣ ರಿಂಗಣ ನೋಟ' ಎಂದು ಆರಂಭವಾಗುವ ಡ್ಯುಯೆಟ್ ಹಾಡೊಂದಿದೆ. ರಾಜೇಶ್ ಕೃಷ್ಣನ್, ಅನುರಾಧಾ ಶ್ರೀರಾಮ್ ಹಾಡಿರುವ ಈ ಹಾಡು ಕೇಳಿದರೆ ಹಿಂದಿ ಸಿನಿಮಾದ ಜನಪ್ರಿಯ ಗೀತೆಯೊಂದು ನೆನಪಿಗೆ ಬರುತ್ತದೆ. ಯೆಸ್...ನಿಮ್ಮ ಊಹೆ ಸರಿ, ಇದು 'ಕಶ್ಮೀರ್ ಕಿ ಕಲೀ' ಚಿತ್ರದ ಯೇ ಚಾಂದ್ ಸ ರೋಷನ್ ಚೆಹೆರಾ ಹಾಡು.

ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ನಟಿಸಿರುವ ಈ ಚಿತ್ರದ ಹಾಡು 70ರ ದಶಕದ ಹಿಟ್ ಹಾಡುಗಳಲ್ಲೊಂದಾಗಿತ್ತು. ಇಂಥಾ ಜನಪ್ರಿಯ ಹಾಡಿನಿಂದ ಸ್ಫೂರ್ತಿ ಪಡೆದು ರಿಂಗಣ ರಿಂಗಣ ಹಾಡಿಗೆ ಸಂಗೀತ ನಿರ್ದೇಶಿಸಿದ್ದು ಸಾಧು ಕೋಕಿಲ!

ADVERTISEMENT

ಚಿತ್ರ: ಕೋಡಗನ ಕೋಳಿ ನುಂಗಿತ್ತ
ಹಾಡು: ರಿಂಗಣ ರಿಂಗಣ
ಗಾಯಕರು : ರಾಜೇಶ್ ಕೃಷ್ಣನ್, ಅನುರಾಧಾ ಶ್ರೀರಾಂ
ಸಂಗೀತ ನಿರ್ದೇಶಕ: ಸಾಧು ಕೋಕಿಲ

ಸಾಮ್ಯತೆ
ಚಿತ್ರ: ಕಶ್ಮೀರ್ ಕಿ ಕಲೀ (ಹಿಂದಿ)
ಹಾಡು: ಯೇ ಚಾಂದ್‍ ಸ ರೋಷನ್ ಚೆಹೆರಾ
ಗಾಯಕರು: ಮೊಹಮ್ಮದ್ ರಫಿ
ಸಂಗೀತ ನಿರ್ದೇಶಕರು : ಒ.ಪಿ. ನಯ್ಯರ್, ಎಸ್. ಎಚ್. ಬಿಹಾರಿ

[related]

ಪರಭಾಷೆಯ ಹಾಡುಗಳ ಹಿನ್ನೆಲೆ ಸಂಗೀತವನ್ನು ಅಲ್ಪ ಸ್ವಲ್ಪವೇ ಮಾರ್ಪಡಿಸಿ ಅಥವಾ ಶ್ರುತಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡುವ ಮೂಲಕ ಕನ್ನಡಕ್ಕೆ ಬಂದ ಹಲವಾರು ಹಾಡುಗಳು ನಮ್ಮ ಚಿತ್ರರಂಗದಲ್ಲಿದೆ. ಹೀಗೆ ಇನ್ನೊಂದು ಭಾಷೆಯಿಂದ ಸ್ಫೂರ್ತಿ ಪಡೆದು ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಹಾಡುಗಳ ಬಗ್ಗೆ ನಿಮಗೆ ಗೊತ್ತಿದ್ದರೆ ಕಾಮೆಂಟ್ ಮೂಲಕ ನಮಗೆ ತಿಳಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.