ವಿಜಯಪುರ: ‘ಈಗಷ್ಟೇ ವರ್ಗವಾಗಿ ಬಂದಿರುವೆ, ನಮ್ ಸಾಹೇಬ್ರು ಇಲಾಖೆಯ ಮೀಟಿಂಗ್‌ಗೆ ಹೋಗಿದ್ದಾರೆ. ನಾ ಹೊಸಬನಿದ್ದೇನೆ... ಇನ್ಮುಂದಿನ ಕೆಡಿಪಿ ಸಭೆಗಳಲ್ಲಿ ಇಂಥ ಸಬೂಬುಗಳಿಗೆ ಅವಕಾಶವಿಲ್ಲ... ಸಭೆಗೆ ಹಾಜರಾಗುವ ಅಧಿಕಾರಿಗಳು ತಮ್ಮ ಇಲಾಖೆಯ ಒಟ್ಟಾರೆ ಪ್ರಗತಿಯ ಮಾಹಿತಿಯೊಟ್ಟಿಗೆ ಬರಬೇಕು...’
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
ಯಶವಂತರಾಯಗೌಡ ಪಾಟೀಲ ಅಧಿಕಾರಿಗಳ ಕಾರ್ಯವೈಖರಿಗೆ ಚಾಟಿ ಬೀಸುವ ನಡುವೆಯೇ, ‘ನೀವಷ್ಟೇ ಅಲ್ಲ. ಇಲ್ಲಿರುವ ಸಚಿವರೂ ಹೊಸಬರೇ. ಅವರಿಗೂ ನಿಮ್ಮ ಇಲಾಖೆಗಳಲ್ಲಿ ನೀವೇನು ಮಾಡಿದ್ದೀರಿ ಎಂಬ ಮಾಹಿತಿಯಿಲ್ಲ. ಹೊಸಬ ಎಂಬ ಸಬೂಬು ಬಿಟ್ಟು, ಹೊಸ ಸಚಿವರಿಗೂ ಮಾಹಿತಿ ನೀಡಿ’ ಎಂದು ತಮ್ಮ ಆಪ್ತ ಸಚಿವ ಮಿತ್ರನ ಕಾಲೆಳೆಯುುತ್ತಲೇ ಅಧಿಕಾರಿಗಳಿಗೆ ಹುಕುಂ ಹೊರಡಿಸುತ್ತಿದ್ದಂತೆ ಬಿಗುವಿನಿಂದ ಕೂಡಿದ್ದ ಸಭೆಯಲ್ಲಿ ನಗೆಬುಗ್ಗೆ ಚಿಮ್ಮಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.