ADVERTISEMENT

ನಾಯಕರಿಗೆ ದಾರಿಬಿಡಿ...

ಪೀರ್‌ ಪಾಶ, ಬೆಂಗಳೂರು
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST

l ಕ್ಯಾಂಪಸ್‌ನಲ್ಲಿ ಮತ್ತೆ ಎಲೆಕ್ಷನ್‌ ಶುರು ಆಗುತ್ತಂತೆ?

ಎಬಿವಿಪಿ: ಬರ್‍ಲಿ ಬಿಡಿ ಸರ್‌. ಒಂದು ಸಮೂಹ ಅಂತ ಇದ್ದಮೇಲೆ, ಒಂದು ಎಲೆಕ್ಷನ್‌ ಬೇಡ್ವೆ? ಸಮೂಹವನ್ನು ನಡೆಸೋಕೆ ಒಬ್ಬ ನಾಯಕ ಅಂತ ಬೇಕಲ್ಲ? ಅಂತಹ ನಾಯಕನನ್ನು ಕಾಲೇಜು ಚುನಾವಣೆಗಳು ರೂಪಿಸುತ್ವೆ ಬಿಡಿ. ಇದರಿಂದ ನಮಗೂ ಬಲ ಬರುತ್ತೆ.

ಎಸ್‌ಎಫ್‌ಐ: ಚುನಾವಣೆ ನಡೆದರೆ ನಾಯಕರು ಸಿಗುತ್ತಾರೆ. ವಿದ್ಯಾರ್ಥಿ ಪ್ರತಿನಿಧಿಯಾಗಿ ಅವರಿಗೆ ವಿ.ವಿ. ಸಿಂಡಿಕೇಟ್‌ನ ಸದಸ್ಯ ಸ್ಥಾನ ನೀಡುವಂತೆ ಒತ್ತಾಯಿಸುತ್ತೇವೆ. ಸದಸ್ಯತ್ವ ಸ್ಥಾನ ಸಿಕ್ಕಮೇಲೆ ಹಗರಣಗಳನ್ನು ಬಯಲಿಗೆ ಎಳೆಯುತ್ತೇವೆ.

ADVERTISEMENT

l ಎಲೆಕ್ಷನ್‌ನಿಂದ ರೂಪುಗೊಂಡ ನಾಯಕರಿಂದ ಹೆಂಗೆ ಅನುಕೂಲ ಆಗುತ್ತೆ?

ಎಬಿವಿಪಿ: ಈಗ ಯಾವುದೇ ಸಮಸ್ಯೆಯನ್ನು ಪ್ರಿನ್ಸಿಪಾಲರಿಗೆ ಹೇಳಲು ಹೋದರೆ ತುಂಬ ಹೊತ್ತು ಕಾಯಿಸುತ್ತಾರೆ. ಪಾಠಗಳನ್ನು ಸರಿಯಾಗಿ ಮಾಡದ, ಪಠ್ಯಗಳ ಬೋಧನೆಯನ್ನು ಸಕಾಲಕ್ಕೆ ಮುಗಿಸದ ಅಧ್ಯಾಪಕರಿಗೆ ನಾವೀಗ ಒಂಟಿಯಾಗಿ ಪ್ರಶ್ನಿಸಿದರೆ ನೋಟೆಡ್‌ ಆಗುತ್ತೇವೆ. ಕೆಲವು ಅಧ್ಯಾಪಕರಂತೂ ಇಂಟರ್ನಲ್‌ ಮಾರ್ಕ್ಸ್‌ ಅನ್ನು ಬೇಕಾಬಿಟ್ಟಿ ಕಟ್‌ ಮಾಡುತ್ತಾರೆ. ವಿದ್ಯಾರ್ಥಿಗಳ ಸಮರ್ಥ ಪ್ರತಿನಿಧಿ ಇದ್ದರೆ, ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತೋಕೆ ಸಾಧ್ಯವಾಗುತ್ತೆ.

ಎಸ್‌ಎಫ್‌ಐ: ಈಗ ರಿಯಲ್‌ ಎಸ್ಟೇಟ್‌ ಹಿನ್ನೆಲೆಯಿಂದ ಬಂದ ಜನಪ್ರತಿನಿಧಿಗಳು ಸ್ವಹಿತಕ್ಕೆ ಮಾತ್ರ ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿ ನಾಯಕರು ರಾಜಕೀಯಕ್ಕೆ ಬಂದರೆ, ಒಳ್ಳೆಯ ರಾಜಕಾರಣಿಗಳ ಸಂಖ್ಯೆ ಹೆಚ್ಚಲಿದೆ. ಇಂಥವರ ಸಂಖ್ಯೆ ಹೆಚ್ಚಾದಷ್ಟೂ ಸಮಾಜಕ್ಕೆ ಒಳ್ಳೆಯದು. ಅದಕ್ಕೇ ಎಲೆಕ್ಷನ್‌ ಬೇಕು ನೋಡ್ರಿ.

l ಎಲೆಕ್ಷನ್‌ನಿಂದ ಕ್ಯಾಂಪಸ್‌ ವಾತಾವರಣ ಕೆಡುವುದಿಲ್ಲವೇ?

ಎಬಿವಿಪಿ: ಕ್ಯಾಂಪಸ್‌ ವಾತಾವರಣ ಯಾಕೆ ಕೆಡುತ್ತದೆ ಹೇಳಿ? ನಾಯಕತ್ವ ಬೆಳೆದರೆ, ನಮಗೆ ಭಯ ಅನ್ನೋದು ಇರಲ್ಲ. ಯಾವುದೇ ಉದ್ಯೋಗಕ್ಕೆ ಹೋದರೂ ಅಲ್ಲಿನ ಒತ್ತಡ ಸಹಿಸುವ ಸಾಮರ್ಥ್ಯ ಬೆಳೆಯುತ್ತೆ. ನ್ಯಾಯವಾದ ತೀರ್ಮಾನ ತೆಗೆದುಕೊಳ್ಳುವ ಮಾನಸಿಕ ದೃಢತೆ ಈ ಚುನಾವಣೆಗಳಿಂದ ನಮಗೆ ಸಿಗುತ್ತೆ.

ಎಸ್‌ಎಫ್‌ಐ: ಕ್ಯಾಂಪಸ್‌ ವಾತಾವರಣ ಏನೂ ಕೆಡುವುದಿಲ್ಲ. ಬದಲಾಗಿ ಶೈಕ್ಷಣಿಕ ವಾತಾವರಣ ಸುಧಾರಣೆ ಆಗಲಿದೆ. ನಮ್ಮ ಉತ್ಸಾಹ ಇಮ್ಮಡಿಯಾಗಲಿದೆ. ವಿದ್ಯಾರ್ಥಿಗಳ ಬೇಡಿಕೆಗಳು ತ್ವರಿತವಾಗಿ ಈಡೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.