ADVERTISEMENT

ಕರ್ನಾಟಕದಲ್ಲಿ 104 ಕೃಷಿಕರು ಕಣ್ಮರೆ!

ಮಂಜುನಾಥ ಹೊಳಲು
Published 5 ಫೆಬ್ರುವರಿ 2013, 19:59 IST
Last Updated 5 ಫೆಬ್ರುವರಿ 2013, 19:59 IST

ಇವತ್ತಿನ ರೈತರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ರೈತರ ಹಿತ ಕಾಯುವುದರಲ್ಲಿ ಅಧಿಕಾರ ವರ್ಗ ಹಾಗೂ ಶಾಸಕಾಂಗ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ 2012ರಲ್ಲಿ ಒಟ್ಟು 104 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2012ರ (ಜನವರಿ-ಡಿಸೆಂಬರ್)  ಅಂಕಿ ಅಂಶಗಳನ್ನು ಅವಲೋಕಿಸಿದಾಗ ಕೆಲ ಅಂಶಗಳು ಅಚ್ಚರಿ ಮೂಡಿಸಿದವು. ಅವುಗಳಲ್ಲಿ ಬೀದರ್ ಜಿಲ್ಲೆಯಲ್ಲಿ 14 ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ 11 ಮತ್ತು ಉಳಿದ ಜಿಲ್ಲೆಗಳಾದ ಹಾವೇರಿ, ಚಿತ್ರದುರ್ಗ ಹಾಗು ವಿಜಾಪುರ ಜಿಲ್ಲೆಗಳಲ್ಲಿ ತಲಾ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸರ್ಕಾರ ಮತ್ತು ಅಧಿಕಾರ ವರ್ಗದವರು ಸೂಕ್ತ ಯೋಜನೆಗಳನ್ನು ಈಗಲೇ ರೂಪಿಸಿ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.