(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)
ಬೆಂಗಳೂರು, ಮಾ. 2– ರಾಜ್ಯದ ಇತಿಹಾಸದಲ್ಲೇ ಪ್ರಥಮವಾಗಿ 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವೃದ್ಧರಿಗೆ 15 ರೂ. ವಿಶ್ರಾಂತಿ ವೇತನ, ನಾನ್ ಗೆಜೆಟೆಡ್ ನೌಕರರು ಹಾಗೂ ಪೆನ್‌ಷನ್‌ದಾರರ ತುಟ್ಟಿಭತ್ಯದಲ್ಲಿ 5 ರೂಪಾಯಿ ಏರಿಕೆಯ ಸ್ವಾಗತಾರ್ಹ ಲಕ್ಷಣಗಳನ್ನೊಳಗೊಂಡು 7 ಲಕ್ಷ ರೂಪಾಯಿ ಉಳಿತಾಯದೊಡನೆ ಹೊಸ ತೆರಿಗೆಯನ್ನು ಹೇರದಿರುವ 64–65ನೇ ಸಾಲಿನ ಬಡ್ಜೆಟ್ಟನ್ನು ಅರ್ಥಸಚಿವ ಶ್ರೀ ಬಿ. ಡಿ. ಜತ್ತಿ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.
ಕಾಶ್ಮೀರ ವಿವಾದ ಪರಿಹಾರಕ್ಕೆ ಅಮೆರಿಕದ ಹೊಸ ಯೋಚನೆ ಇಲ್ಲ
ವಾಷಿಂಗ್ಟನ್, ಮಾ. 2– ಕಾಶ್ಮೀರ ವಿವಾದ ಪರಿಹಾರಕ್ಕೆ ಅಮೆರಿಕ ಯಾವ ಹೊಸ ಯೋಚನೆಯನ್ನೂ ಸೂಚಿಸಿಲ್ಲ ಎಂದು ಸ್ಟೇಟ್ ಇಲಾಖೆ ವಕ್ತಾರರು ಇಂದು ವರದಿಗಾರರಿಗೆ ತಿಳಿಸಿದರು.
ಸ್ವತಂತ್ರ ಕಾಶ್ಮೀರ ನಿರ್ಮಾಣದ ಮೂಲಕ ವಿವಾದ ಪರಿಹರಿಸಬಹುದೆಂದು ಅಮೆರಿಕ ಸೂಚಿಸಿದೆಯೆ ಎಂಬ ಪ್ರಶ್ನೆಗೆ ಅವರು, ‘ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.