ADVERTISEMENT

ಗುರುವಾರ, 10–2–1994

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 20:00 IST
Last Updated 9 ಫೆಬ್ರುವರಿ 2019, 20:00 IST
   

ಕಣ್ಣೀರಿಟ್ಟ ಶಾಸಕ– ಪ್ರತಿಪಕ್ಷ ಸಭಾತ್ಯಾಗ

ಬೆಂಗಳೂರು, ಫೆ. 9– ರೈತರ ಹಿತದೃಷ್ಟಿಯಿಂದ ನಡೆದ ಚರ್ಚೆ ವೈಯಕ್ತಿಕ ನೆಲೆಗೆ ತಿರುಗಿದ ಪರಿಣಾಮವಾಗಿ ನೊಂದ ಶಾಸಕರೊಬ್ಬರು ಕಣ್ಣೀರಿಟ್ಟು, ರಾಜೀನಾಮೆವರೆಗೂ ಮುಂದಾದ ಪ್ರಸಂಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ– ವಾಗ್ವಾದಕ್ಕೆ ಕಾರಣವಾಗಿ, ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದರಿಂದ ಸದನ ಮುಂದೂಡಿದ ಅಪರೂಪದ ಘಟನೆ ಇಂದು ವಿಧಾನಸಭೆಯಲ್ಲಿ ನಡೆಯಿತು.

ಸಂಜೆ ಪೂರಕ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಜನತಾ ದಳದ ಎಚ್. ಏಕಾಂತಯ್ಯ ಕಣ್ಣೀರು ಇಟ್ಟಿದ್ದು ವಿರೋಧ ಪಕ್ಷಗಳ ಸದಸ್ಯರನ್ನು ಕೆರಳಿಸಿತು. ಇದರಿಂದ ಏರಿದ ದನಿಯ ವಾಗ್ಯುದ್ದವೇ ನಡೆಯಿತು. ಸರ್ಕಾರ ಸದನವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದೆ ಎಂದು ಪ‍್ರತಿಭಟಿಸಿ ಸಭಾತ್ಯಾಗ ಮಾಡಿದ ವಿರೋಧಿ ಸದಸ್ಯರು ನಂತರ ಸದನಕ್ಕೆ ಬರಲೇ ಇಲ್ಲ. ಕಡೆಗೆ ಉಪಾಧ್ಯಕ್ಷ ಆಂಜನಮೂರ್ತಿ ಸದನವನ್ನು ನಾಳೆಗೆ ಮುಂದೂಡಿದರು.

ADVERTISEMENT

ಅಂಬೇಡ್ಕರ್ ಹರಿಜನರ ಉದ್ಧಾರಕ ಅಲ್ಲ

ಅಲಹಾಬಾದ್, ಫೆ. 9 (ಪಿಟಿಐ)– ವಿಶ್ವ ಹಿಂದೂ ಪರಿಷತ್ತಿನ ನಾಯಕ ಅಶೋಕ್ ಸಿಂಘಾಲ್‌ ಅವರು ಡಿಸೆಂಬರ್ 6 ರಂದು ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಶ್ರೀರಾಮಚಂದ್ರನ ಭಾವಚಿತ್ರದೊಂದಿಗೆ ಇರಿಸಿರುವುದು ‘ಕಾನೂನುಬಾಹಿರ’ ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.