ADVERTISEMENT

ಗುರುವಾರ, 11–4–1968

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST

ಕೃಷ್ಣಾ ನೀರು ಹಂಚಿಕೆ ವಿವಾದ: ಕೇಂದ್ರಕ್ಕೆ ರಾಜ್ಯದ ನೋಟೀಸ್ ಸಿದ್ಧ

ಬೆಂಗಳೂರು, ಏ. 10– ಕೃಷ್ಣಾ– ಗೋದಾವರಿ ವಿವಾದದ ಬಗ್ಗೆ ಕಾಯಿದೆ ಅನ್ವಯ ರಾಜ್ಯವು ಕೇಂದ್ರ ಸರಕಾರಕ್ಕೆ ಕೊಡಲು ಉದ್ದೇಶಿಸಿರುವ ನೋಟೀಸಿನ ಕರಡು ಸಿದ್ಧವಾಗಿದೆಯೆಂದು ಲೋಕೋ‍ಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ಹೇಳಿದರು.

ಪ್ರಶ್ನೋತ್ತರ ಕಾಲದ ನಂತರ ವಿರೋಧ ಪಕ್ಷದ ನಾಯಕ ಶ್ರೀ ಎಸ್. ಶಿವಪ್ಪ ಮತ್ತು ಶ್ರೀ ಎಚ್.ಎನ್. ನಂಜೇಗೌಡ (ಸ್ವ.ಪ) ಅವರು ಈ ಬಗ್ಗೆ ಪ್ರಶ್ನಿಸಿ ಸರಕಾರದ ನಿಲುವೇನೆಂಬುದನ್ನು ಸ್ಪಷ್ಟಪಡಿಸಲು ಕೋರಿಕೊಂಡರು.

ADVERTISEMENT

ಚಿತ್ರೋದ್ಯಮದ ಬಗ್ಗೆ ತನಿಖೆಗೆ ಸಮಿತಿ ನೇಮಕ: ಷಹಾ ಹೇಳಿಕೆ

ನವದೆಹಲಿ, ಏ. 10– ಚಲನಚ್ಚಿತ್ರ ಕಲಾವಿದರು ಹಾಗೂ ಪ್ರದರ್ಶಕರ ಜತೆ ಇರುವ ತಮ್ಮ ವಿವಾದವನ್ನು ನಿರ್ಮಾಪಕರು ಪರಿಹರಿಸಿಕೊಳ್ಳದಿದ್ದರೆ ಸರ್ಕಾರ ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ವಾರ್ತಾ ಸಚಿವ ಕೆ.ಕೆ. ಷಹಾ ಇಂದು ತಿಳಿಸಿದರು.

ಚಿತ್ರೋದ್ಯಮ ಹಾಗೂ ಕಪ್ಪುಹಣ, ಚಿತ್ರದ ಗುಣಮಟ್ಟ ಮತ್ತು ಇತರ ವಿಷಯಗಳ ಬಗ್ಗೆ ಕೂಲಂಕಷ ತನಿಖೆ ನಡೆಸಲು ಸಮಿತಿಯೊಂದನ್ನು ನೇಮಿಸ
ಲಾಗಿದೆ ಎಂದು ಜಾರ್ಜ್‌ಫರ್ನಾಂಡೀಸ್ ಪ್ರಶ್ನೆಗೆ ಅವರು ಉತ್ತರಿಸಿದರು.

ಉಪಾಧ್ಯಾಯರ ಕೊಲೆ: ಹಾಸಿಗೆ ಒಯ್ದ ರಿಕ್ಷಾವಾಲನ ಬಂಧನ

ವಾರಾಣಸಿ, ಏ. 10– ಜನಸಂಘದ ಅಧ್ಯಕ್ಷ ದೀನ ದಯಾಳ ಉಪಾಧ್ಯಾಯರ ಕೊಲೆ ಸಂಬಂಧದಲ್ಲಿ ರಿಕ್ಷಾ ಎಳೆಯುವನೊಬ್ಬನನ್ನು ಪೋಲೀಸರು ಬಂಧಿಸಿ
ದ್ದಾರೆ.

ಮೊಗಲ್ ಸರಯ್ ರೈಲ್ವೆ ನಿಲ್ದಾಣದ ಹಳಿಗಳ ಬಳಿ ಉಪಾಧ್ಯಾಯರ ದೇಹ ಪತ್ತೆಯಾದ ರಾತ್ರಿಯೇ ಜನಸಂಘದ ನಾಯಕರ ಹಾಸಿಗೆಯನ್ನು ಒಬ್ಬರಮನೆಗೊಯ್ದು ಮಾರಲಾಯಿತೆಂದೂ ಹಾಸಿಗೆಯನ್ನು ಈ ರಿಕ್ಷಾವಾಲನ ರಿಕ್ಷಾದಲ್ಲಿ ಒಯ್ಯಲಾಯಿತೆಂದೂ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.