ADVERTISEMENT

ಗುರುವಾರ, 16-2-1962

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಮೂರನೇ ಮಹಾ ಚುನಾವಣೆ ಇಂದು ಆರಂಭ
ಕಲ್ಕತ್ತ, ಫೆ. 15
-  ಈ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಮೂರನೇ ಸಾರ್ವತ್ರಿಕ ಚುನಾವಣೆಗಳು ನಾಳೆ ಪಶ್ಚಿಮ ಬಂಗಾಳದಲ್ಲಿ 18 ಲೋಕಸಭಾ ಮತ್ತು 44 ರಾಜ್ಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಸುಮಾರು 60 ಲಕ್ಷ ಮತದಾರರೂ ವೋಟು ಮಾಡಲು ಹೋಗುವುದರೊಂದಿಗೆ ಆರಂಭವಾಗಲಿದೆ.

ನಾಳೆ ರಾಜ್ಯದ 16 ಜಿಲ್ಲೆಗಳಲ್ಲಿ ಏಳು ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಉತ್ಪನ್ನದ ಗುರಿ ಸಾಧನೆ
ಬೆಂಗಳೂರು, ಫೆ. 15
- ಕೇವಲ 6 ಲಕ್ಷ ರೂಪಾಯಿಗಳ ಉತ್ಪಾದನಾ ಸಾಮರ್ಥ್ಯ ದೊಂದಿಗೆ 6 ವರ್ಷಗಳ ಹಿಂದೆ ಸ್ಥಾಪಿತ ವಾದ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಈ ವರ್ಷ 2 ಕೋಟಿ ರೂಪಾಯಿಗಳಷ್ಟು ಉತ್ಪಾದನೆಯನ್ನು ಸಾಧಿಸಿ, ಬರುವ ವರ್ಷಕ್ಕೆ ಮೂರು ಕೋಟಿ ರೂಪಾಯಿಗಳ ಉತ್ಪಾದನಾ ಗುರಿ ಹೊಂದಿದೆಯೆಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ಬಿ. ವಿ. ಬಾಳಿಗರವರು ಇಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.