ADVERTISEMENT

ಬುಧವಾರ, 17-4-1963

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ಇಂದಿನಿಂದ ಸೀಮೆ ಎಣ್ಣೆಗೆ ಕಡಿಮೆ ಬೆಲೆ
ನವದೆಹಲಿ, ಏ. 16 - ಉತ್ತಮ ಹಾಗೂ ಕೆಳದರ್ಜೆಯ ಸೀಮೆ ಎಣ್ಣೆಯ ಮೇಲೆ ವಿಧಿಸಲಾಗಿದ್ದ ಎಕ್ಸೈಜ್ ತೆರಿಗೆಯಲ್ಲಿ 11 ಕೋಟಿ ರೂ. ಮತ್ತು ಅಧಿಕ ಲಾಭ ತೆರಿಗೆಯಲ್ಲಿ 5 ಕೋಟಿ ರೂ. ಒಟ್ಟು 16 ಕೋಟಿ ರೂಪಾಯಿ ತೆರಿಗೆ ರಿಯಾಯ್ತಿಯನ್ನು ಕೇಂದ್ರ ಹಣಕಾಸು ಮಂತ್ರಿ ಶ್ರೀ ಮೊರಾರ‌್ಜಿ ದೇಸಾಯಿಯವರು ಇಂದು ಲೋಕ ಸಭೆಯಲ್ಲಿ ಪ್ರಕಟಿಸಿದರು.

ಸೀಮೆ ಎಣ್ಣೆ ಮೇಲಿನ ತೆರಿಗೆ ರಿಯಾಯ್ತಿಯ ಪರಿಣಾಮವಾಗಿ ನಾಳೆಯಿಂದ ಕೆಳದರ್ಜೆ ಸೀಮೆ ಎಣ್ಣೆ ಬೆಲೆ ಸೀಸೆಗೆ ನಾಲ್ಕು ನ. ಪೈ. ಉತ್ತಮ ದರ್ಜೆ ಸೀಮೆ ಎಣ್ಣೆ ಬೆಲೆ ಸೀಸೆಗೆ ಎರಡು ನ. ಪೈ. ಕಡಿಮೆಯಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.