ADVERTISEMENT

ಬುಧವಾರ, 23-2-1961

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 14:30 IST
Last Updated 22 ಫೆಬ್ರುವರಿ 2011, 14:30 IST

ಬ್ರಿಟನ್ ರಾಣಿಯಿಂದ ಹಾವು - ಮುಂಗುಸಿ ಕಾಳಗ ವೀಕ್ಷಣೆ
ಬೆಂಗಳೂರು, ಫೆ. 22 - ನಾಗರ ಹಾವು ಹಾಗೂ ಮುಂಗುಸಿಯ ಕಾಳಗ ವೀಕ್ಷಣೆಯ ಮನರಂಜನೆಯೊಡನೆ ಬ್ರಿಟನ್ನಿನ ರಾಣಿ ಹಾಗೂ ಎಡಿನ್ ಬರೇಡ್ಯೂಕರು ಇಂದು ನಗರಕ್ಕೆ 37 ಮೈಲಿ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ಪೂರ್ಣ ವಿಶ್ರಾಂತಿ ಪಡೆದರು.
ಸುಮಾರು 100 ವರ್ಷಗಳ ಹಿಂದೆ ನಿರ್ಮಿತವಾದ ಕಬ್ಬನ್ ಹೌಸ್‌ನಲ್ಲಿ ನಗರದಿಂದ ಕರೆದುಕೊಂಡು ಹೋಗಲಾಗಿದ್ದ ಹಾವಾಡಿಗನೊಬ್ಬ ಹಾವು - ಮುಂಗುಸಿ ಜಗಳವನ್ನು ತೋರಿಸಿದ. ಪುಂಗಿ ಬಾರಿಸಿದಾಗ ಹಾವು ಹೆಡೆಯಾಡಿಸುವುದನ್ನು ರಾಜ ಅತಿಥಿಗಳು ವೀಕ್ಷಿಸಿದರು.

ಪ್ರತಿ ಠೇವಣಿದಾರರಿಗೂ 250 ರೂ. ನೀಡಿಕೆ
ನವದೆಹಲಿ, ಫೆ. 22 - ಈಗ ಲಿಕ್ವಿಡೇಷನ್‌ನಲ್ಲಿರುವ ಪಲೈ ಸೆಂಟ್ರಲ್ ಬ್ಯಾಂಕ್‌ನ ಪ್ರತಿಯೊಬ್ಬ ಠೇವಣಿದಾರನಿಗೂ ಆದ್ಯತೆಯ ಮೇಲೆ ತಲಾ 250 ರೂ. ಗಳನ್ನು ನೀಡಲಾಗುವುದೆಂದು ಅರ್ಥ ಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಲೋಕ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.