ADVERTISEMENT

ಭಾನುವಾರ, 14–11–1993

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 20:15 IST
Last Updated 13 ನವೆಂಬರ್ 2018, 20:15 IST

ಲಂಕಾ: ಎಲ್‌ಟಿಟಿಇ ಮುತ್ತಿಗೆ ತೆರವು

ಕೊಲಂಬೊ, ನ. 13 (ಎಎಫ್‌ಪಿ)– ಉತ್ತರ ಜಾಫ್ನಾದ ಪೂನೆರಿನ್ ಸೇನಾನೆಲೆಗೆ ಎಲ್‌ಟಿಟಿಇ ಗೆರಿಲ್ಲಾಗಳು ಹಾಕಿದ್ದ ಮುತ್ತಿಗೆಯನ್ನು ಇಂದು ಹೊರಗಿನಿಂದ ಬಂದ ಲಂಕಾ ಪಡೆಗಳು ತೆರವು ಮಾಡಿದವು. ಇಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ಸಮರದಲ್ಲಿ ಸತ್ತ ಮತ್ತು ಗಾಯಗೊಂಡವರ ಸಂಖ್ಯೆ 900 ದಾಟಿದೆ ಎಂದು ಸೈನ್ಯದ ವಕ್ತಾರರು ತಿಳಿಸಿದ್ದಾರೆ.

ಕುಸಿಯುತ್ತಿರುವ ಉಗ್ರಗಾಮಿಗಳ ಸ್ಥೈರ್ಯ

ADVERTISEMENT

ಶ್ರೀನಗರ, ನ. 13 (ಪಿಟಿಐ)– ಹಜರತ್ ಬಾಲ್ ದರ್ಗಾದೊಳಗೆ ಇರುವ ಉಗ್ರಗಾಮಿಗಳ ಸ್ಥೈರ್ಯ ಕುಸಿಯುತ್ತಿದ್ದು, ಶರಣಾಗದೇ ಬೇರೆ ದಾರಿಯಿಲ್ಲ ಎಂದು ಅಧಿಕಾರಿಗಳು ಅವರಿಗೆ ಸ್ಪಷ್ಟಪಡಿಸಿದ್ದಾರೆ.

ದರ್ಗಾದಿಂದ ಹೊರಬಂದು ಶರಣಾಗದೇ ವಿಧಿಯಿಲ್ಲ ಎಂದು ತಾವು ಉಗ್ರಗಾಮಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾಗಿ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಮತ್ತು ಸರ್ಕಾರಿ ಸಂಧಾನಕಾರ ಮೆಹ್ಮೂದ್ ಉರ್ ರೆಹ್ಮಾನ್ ಬಳಿಕ ಪಿಟಿಐಗೆ ತಿಳಿಸಿದರು. ಇದಕ್ಕೂ ಮುನ್ನ ಅವರು ಉಗ್ರಗಾಮಿಗಳ ಜತೆ ಎರಡು ತಾಸು ನೇರ ಮಾತುಕತೆ ನಡೆಸಿದರು.

ಲೆಘಾರಿ ಪಾಕ್ ಅಧ್ಯಕ್ಷ

ಇಸ್ಲಾಮಾಬಾದ್, ಜ. 13– ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಅಭ್ಯರ್ಥಿ ಸರ್ದಾರ್ ಫಾರೂಖ್ ಅಹ್ಮದ್ ಖಾನ್ ಲೆಘಾರಿ ಅವರು ಪಾಕಿಸ್ತಾನದ ಎಂಟನೇ ಅಧ್ಯಕ್ಷರಾಗಿ ಇಂದು ಆಯ್ಕೆಯಾದರು. ಅವರು ತಮ್ಮ ಪ್ರತಿಸ್ಪರ್ಧಿ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿ.ಎಂ.ಎಲ್) ಅಭ್ಯರ್ಥಿ ವಾಸಿಂ ಸಜ್ಜದ್ ಅವರನ್ನು 106 ಮತಗಳಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.