ಭಾರತ ರತ್ನ ಪಂಡಿತ್ ಪಂತ್ ಇನ್ನಿಲ್ಲ
ನವದೆಹಲಿ, ಮಾ. 7 - ಸ್ವಾತಂತ್ರ್ಯ ಯೋಧರೂ, ತ್ಯಾಗಶೀಲರೂ, ಕೇಂದ್ರ ಗೃಹ ಸಚಿವರೂ, ಭಾರತೀಯರ ನೆಚ್ಚಿನ ನಾಯಕರೂ ಆದ ಭಾರತ ರತ್ನ ಪಂಡಿತ್ ಗೋವಿಂದ ವಲ್ಲಭ ಪಂತ್ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಪುತ್ರರೂ ಹಾಗೂ ಇಬ್ಬರು ಪುತ್ರಿಯರೂ ಇದ್ದಾರೆ.
ಪಾರ್ಲಿಮೆಂಟ್ ಮುಂದಕ್ಕೆ
ನವದೆಹಲಿ, ಮಾ. 7 - ಪಾರ್ಲಿಮೆಂಟಿನ ಉಭಯ ಸದನಗಳೂ ಇಂದು ಪಂಡಿತ್ ಪಂತ್‌ರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ನಂತರ ಸಭೆಯ ಕಾರ್ಯ ಕಲಾಪಗಳನ್ನು ಮುಂದಕ್ಕೆ ಹಾಕಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.