ADVERTISEMENT

ಮೇಲ್ಮನೆಯಲ್ಲಿ ಭಾಷಾ ಮಸೂದೆಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಮೇಲ್ಮನೆಯಲ್ಲಿ ಭಾಷಾ ಮಸೂದೆಯ ಅಂಗೀಕಾರ
ಬೆಂಗಳೂರು, ಸೆ. 21 – ಈಗಾಗಲೇ ವಿಧಾನ ಸಭೆಯಲ್ಲಿ ಅಂಗೀಕೃತವಾಗಿರುವ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಮಸೂದೆ ಇಂದು ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ಅಂಗೀಕೃತವಾಯಿತು.

ಮೂರು ದಿನಗಳ ಕಾಲ ನಡೆದ ಚರ್ಚೆಗೆ ಉತ್ತರವಿತ್ತ ನ್ಯಾಯಾಂಗ  ಹಾಗೂ ಅಬ್ಕಾರಿ ಸಚಿವ ಶ್ರೀ ಎಂ. ವಿ. ರಾಮರಾಯರು ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಪ್ರಯತ್ನದಲ್ಲಿ ಸರ್ಕಾರ ಪ್ರಥಮ ಹೆಜ್ಜೆಯನ್ನು ಇಟ್ಟಿದೆಯೆಂದು ತಿಳಿಸಿದರು.

ಮಸೂದೆಯನ್ನು ಪಾಸು ಮಾಡಿ ಸುಮ್ಮನೆ ಕುಳಿತುಕೊಳ್ಳಲು ಸರ್ಕಾರ ಇಚ್ಛಿಸುವುದಿಲ್ಲವೆಂದೂ, ಅದನ್ನು ಯಾವ ರೀತಿಯಲ್ಲಿ ಕಾರ್ಯಗತ ಮಾಡಬೇಕೆಂಬುದರ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳುವುದೆಂದೂ ಶ್ರೀ ರಾಮರಾಯರು ಭರವಸೆ ನೀಡಿದರು.

ನ್ಯಾಯಾಂಗ ತನಿಖೆ ‘ತೀವ್ರ’ ಆಲೋಚನೆಯಲ್ಲಿ: ‘ಎಲ್ಲ ಫೈಲುಗಳು ದೊರಕಿವೆ’: ಮುಖ್ಯಮಂತ್ರಿ
ಬೆಂಗಳೂರು, ಸೆ. 21 – ಶರಾವತಿ ಯೋಜನೆಯ ಬಗ್ಗೆ ನ್ಯಾಯಾಧಿಕಾರಿಯೊಬ್ಬರಿಂದ ತನಿಖೆ ಏರ್ಪಡಿಸುವ ವಿಷಯವನ್ನು ತಾವು ‘ತೀವ್ರವಾಗಿ’ ಆಲೋಚಿಸುತ್ತಿರುವುದಾಗಿ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT