ADVERTISEMENT

ಶುಕ್ರವಾರ, 10-8-1962

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ನೇಪಾಳಿ ವಿಮಾನದ ಅವಶೇಷ ಗೋಚರ?
ಖಟ್ಮಂಡು, ಆ. 9 - ಪಶ್ಚಿಮ ನೇಪಾಳದ ಧೋರ್‌ವರ್ತಾನಿಂದ ಒಂದು ದಿನದ ಪ್ರಯಾಣದ ದೂರದ ಸ್ಥಳವೊಂದರಲ್ಲಿ ವಿಮಾನವೊಂದರ ಭಗ್ನಾವಶೇಷವನ್ನು ಪರ್ವತ ಶಿಖರದ ಮೇಲಿನಿಂದ ಒಬ್ಬ ವ್ಯಕ್ತಿ ನೋಡಿದುದಾಗಿ ನೇಪಾಳ ಸರ್ಕಾರಕ್ಕೆ ಸುದ್ದಿ ಬಂದಿದೆ.

ಈ ಬಗ್ಗೆ ಪರೀಕ್ಷಿಸಲು ಸಣ್ಣ ಹೆಲಿಕಾಪ್ಟರೊಂದನ್ನು ಕಳಿಸಿರುವುದಾಗಿ ನೇಪಾಳದ ಸಂಪರ್ಕ ಶಾಖೆ ಸಚಿವರು ತಿಳಿಸಿದ್ದಾರೆ.

ಕಚೇರಿಗಳಲ್ಲಿ ರಾಷ್ಟ್ರಪತಿ ಭಾವಚಿತ್ರ ಹಾಕಲು ಸೂಚನೆ
ನವದೆಹಲಿ, ಆ. 9 - ಎಲ್ಲಾ ಕಚೇರಿಗಳಲ್ಲಿಯೂ ರಾಷ್ಟ್ರಪತಿಯವರ ಭಾವಚಿತ್ರವನ್ನು ಹಾಕಬೇಕೆಂದು ಭಾರತ ಸರ್ಕಾರ ಸೂಚನೆ ಇತ್ತಿದೆ. ಕೆಲವು ಕಚೇರಿಗಳಲ್ಲಿ ಈಗಲೂ ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರ ಭಾವಚಿತ್ರವೇ ಇರುವುದರಿಂದ ಈ ಸೂಚನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.