ನ್ಯಾಯ ಮಂಡಲಿರಚಿಸಲು ಒತ್ತಾಯ
ಬೆಂಗಳೂರು, ಮಾ. 15 - ಕೃಷ್ಣ ಮತ್ತು ಗೋದಾವರಿ ನೀರನ್ನು ಬಳಸುವ ಸಂಬಂಧದಲ್ಲಿ ಅಥವ ಆ ನೀರಿನ ಬಗ್ಗೆ ವಿವಿಧ ರಾಜ್ಯಗಳಿಗಿರುವ ಹಕ್ಕುಗಳ ಸಂಬಂಧದಲ್ಲಿ ತೀರ್ಪು ಕೊಡಲು ಗುಲ್ಹಾತಿ ಆಯೋಗಕ್ಕೆ ಅಧಿಕಾರವಿಲ್ಲದಿರುವುದರಿಂದ ಈ ಸಂಬಂಧದಲ್ಲಿ ಸಮರ್ಪಕವಾದ ನ್ಯಾಯ ನಿರ್ಣಯವಾಗುವಂತೆ ಮಾಡಲು ನ್ಯಾಯ ಮಂಡಳಿಯನ್ನು ರಚಿಸುವಂತೆ ಮೈಸೂರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಪ್ರಾರ್ಥಿಸಿದೆ ಎಂದು ರಾಜ್ಯಪಾಲ ಜಯಚಾಮರಾಜ ಒಡೆಯರ್‌ರವರು ಇಂದು ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ತಿಳಿಸಿದರು.
ಅಧಿವೇಶನ ಆರಂಭ:ಸದಸ್ಯರಿಂದ ಪ್ರತಿಜ್ಞೆ
ಬೆಂಗಳೂರು, ಮಾ. 15 - ರಾಜ್ಯದ ನೂತನ ವಿಧಾನ ಸಭೆಯ ಸದಸ್ಯರು ಇಂದು ಭಾರತದ ಸಂವಿಧಾನ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುವುದಾಗಿಯೂ, ತಾವು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವುದಾಗಿಯೂ ಪ್ರಮಾಣ ವಚನವನ್ನು ಸ್ವೀಕರಿಸಿ ಇನ್ನೈದು ವರ್ಷಗಳ ಕಾಲ ರಾಜ್ಯದ ಆಡಳಿತವನ್ನು ನಿರ್ವಹಿಸಲು ಸಿದ್ಧವಾದರು.
ಸಭೆಯ ಬಹು ಮಂದಿ ಸದಸ್ಯರು `ಭಗವಂತನ ಹೆಸರಿನ ಮೇಲೂ~ ಕೆಲವು ಸದಸ್ಯರು `ಸತ್ಯ ನಿಷ್ಠೆ~ ಹೆಸರಿನಲ್ಲಿ ಪ್ರತಿಜ್ಞಾ ವಚನವನ್ನು ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.