ADVERTISEMENT

ಸೋಮವಾರ, 24-6-1963

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಎಂ.ಪಿ.ಸಿ.ಸಿ. ಅಧ್ಯಕ್ಷರಾಗಿ ಮಹಮದಾಲಿ ಆಯ್ಕೆ
ಬೆಂಗಳೂರು, ಜೂ. 23-ಪ್ರತಿಸ್ಪರ್ಧಿಯ ಮಾತಿನಲ್ಲೇ ಹೇಳುವುದಾದರೆ “ಪ್ರಚಂಡ ಬಹುಮತದಿಂದ” ಶ್ರೀ ಮಹಮದಾಲಿ ಅವರು ಎಂ.ಪಿ.ಸಿ.ಸಿ. ಅಧ್ಯಕ್ಷರಾಗಿ ಇಂದು ಪುನಃ ಚುನಾಯಿತರಾದರು.

ನಿರೀಕ್ಷಿಸಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆದು ಶ್ರೀ ಮಹಮದಾಲಿ ಅವರು 201 ವೋಟುಗಳನ್ನೂ ಪ್ರತಿಸ್ಪರ್ಧಿ ಶ್ರೀ ಎಚ್.ಎಂ. ಚನ್ನಬಸಪ್ಪನವರು 23 ವೋಟುಗಳನ್ನೂ ಪಡೆದರು.

ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಎಂ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿತ್ತ ಮೇಲೆ ಸುಮಾರು 8 ತಿಂಗಳ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀ ಮಹಮದಾಲಿ ಅವರು ಅಧ್ಯಕ್ಷರಾದರು.

ಚಿನ್ನದ ಹುಚ್ಚು ತ್ಯಜಿಸಲು ಚಳವಳಿ: ಕಾಂಗ್ರೆಸ್ಸಿಗರಿಗೆ ಮೊರಾರ್ಜಿ ಕರೆ
ಕಲ್ಕತ್ತ, ಜೂನ್ 23-  ಜನರ “ಚಿನ್ನದ ಹುಚ್ಚನ್ನು” ನಿವಾರಿಸಲು `ಜನತಾ' ಚಳವಳಿಯೊಂದನ್ನು ಆರಂಭಿಸುವಂತೆ ಅರ್ಥಮಂತ್ರಿ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಇಲ್ಲಿ ಕಾಂಗ್ರೆಸ್ಸಿಗರಿಗೆ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.