ADVERTISEMENT

ಸೋಮವಾರ, 9-9-1963

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಅಧಿಕಾರಿಗಳ ವಾಪಸಿಗೆ ಒತ್ತಾಯ
ಕರಾಚಿ, ಸೆ. 8- ಇಲ್ಲಿರುವ ಭಾರತೀಯ ಹೈಕಮಿಷನ್‌ನ ವೈಮಾನಿಕ ವಿಷಯಗಳ ಸಲಹೆಗಾರ ವಿಂಗ್ ಕಮ್ಯಾಂಡರ್ ಪಿ.ಬಿ. ಪವಾರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ತಕ್ಷಣ ಭಾರತಕ್ಕೆ ವಾಪಸು ಕರೆಸಿಕೊಳ್ಳಬೇಕೆಂದು ಪಾಕಿಸ್ತಾನ್ ಸರಕಾರ ಒತ್ತಾಯ ಮಾಡಿದೆ.

ಇವರುಗಳು ಭಾರಿ ಪ್ರಮಾಣದಲ್ಲಿ ಯೋಜಿತ ಗೂಢಚರ್ಯೆ ನಡೆಸುತ್ತಿದ್ದರೆಂಬ ಕಾರಣದಿಂದ ಅವರ ವಾಪಸಿಗೆ ಒತ್ತಾಯ ಮಾಡಲಾಗಿದೆಯೆಂದು ಅಧಿಕೃತವಾಗಿ ತಿಳಿಸಲಾಗಿದೆ.

ಶ್ರವಣಬೆಳಗೊಳದಲ್ಲಿ  ಪ್ರವಾಸಿ ನಿಲಯ ನಿರ್ಮಾಣ
ಮೈಸೂರು, ಸೆ. 8- ಪ್ರಖ್ಯಾತ ಯಾತ್ರಾ ಕೇಂದ್ರವಾದ ಶ್ರವಣಬೆಳಗೊಳನಲ್ಲಿ 200 ಕೊಠಡಿಗಳುಳ್ಳ “ಗೋಮಟ ಮಹಲ್‌” ಪ್ರವಾಸಿ ಮಂದಿರ ಒಂದನ್ನು ನಿರ್ಮಾಣ ಮಾಡಲಾಗುವುದೆಂದು ರೆವಿನ್ಯೂ ಸಚಿವ ಶ್ರೀ ಎಂ.ವಿ. ಕೃಷ್ಣಪ್ಪನವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT