25 ವರ್ಷದ ಹಿಂದೆ
ಚುನಾವಣಾ ಸಮೀಕ್ಷೆ: ಜೈನ್ ಟಿ.ವಿ ಪ್ರಸಾರಕ್ಕೆ ತಡೆಯಾಜ್ಞೆ
ನವದೆಹಲಿ, ಸೆ. 8 (ಪಿಟಿಐ)– ಜೈನ್ ಟಿ.ವಿಯಲ್ಲಿ ಇಂದು ರಾತ್ರಿ 10 ಗಂಟೆಗೆ ಪ್ರಸಾರವಾಗಬೇಕಿದ್ದ ಫಲಿತಾಂಶ ಪೂರ್ವ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಜೈನ್ ಟಿ.ವಿ ವಿಸ್ತೃತ ಫಲಿತಾಂಶ ಪೂರ್ವ ಸಮೀಕ್ಷೆ ಪ್ರಸಾರವಾಗುತ್ತಿದ್ದು, ಇದು ಚುನಾವಣಾ ಮಾರ್ಗದರ್ಶಿ ಸೂತ್ರದ ಉಲ್ಲಂಘನೆಯಾಗಲಿದೆ ಎಂದು ಆಯೋಗದ ಪರ ವಕೀಲ ಹರೀಶ್ ಸಾಳ್ವೆ ಆರೋಪಿಸಿದ ಹಿನ್ನೆಲೆಯಲ್ಲಿ ಈ ಕುರಿತು ವಿಚಾರಣೆ ಆರಂಭಿಸಿದ ನ್ಯಾಯಪೀಠ ತಡೆಯಾಜ್ಞೆ ನೀಡಿತು.
‘ಪ್ರಜಾವಾಣಿ’ ಕಾರ್ಗಿಲ್ ನಿಧಿ 1.25 ಕೋಟಿ ಪ್ರಧಾನಿಗೆ ಸಲ್ಲಿಕೆ
ನವದೆಹಲಿ, ಸೆ. 8 – ಕಾರ್ಗಿಲ್ ಸಂತ್ರಸ್ತ ಯೋಧರು ಮತ್ತು ಅವರ ಕುಟುಂಬದ ನೆರವಿಗಾಗಿ ಡೆಕ್ಕನ್ ಹೆರಾಲ್ಡ್– ಪ್ರಜಾವಾಣಿ ಪರಿಹಾರ ನಿಧಿ ಟ್ರಸ್ಟ್ ಸಂಗ್ರಹಿಸಿದ ನಿಧಿಯ ಮೊದಲ ಕಂತಿನ ಮೊತ್ತವಾದ 1.25 ಕೋಟಿ ರೂಪಾಯಿಗಳ ಬ್ಯಾಂಕ್ ಡ್ರಾಫ್ಟನ್ನು ಇಂದು ಇಲ್ಲಿ ಪ್ರಧಾನಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸಿತು.
‘ಡೆಕ್ಕನ್ ಹೆರಾಲ್ಡ್’ನ ರಾಜಕೀಯ ವಿಷಯಗಳ ಸಂಪಾದಕ ನಿತೀಶ್ ಚಕ್ರವರ್ತಿ ಅವರು ವಾಜಪೇಯಿ ಅವರ ಅಧಿಕೃತ ನಿವಾಸದಲ್ಲಿ ಡ್ರಾಫ್ಟನ್ನು ಹಸ್ತಾಂತರಿಸಿದರು.
ರಾಜಕೀಯವಾಗಿ ಮುಗಿಸಲು ಸಂಚು: ದೇವೇಗೌಡ
ಹೊಳೆನರಸೀಪುರ, ಸೆ. 8 – ತಮ್ಮನ್ನು ರಾಜಕೀಯವಾಗಿ ಮುಗಿಸಲು ಕೇಂದ್ರ ಸಚಿವರಾದ ಜಾರ್ಜ್ ಫರ್ನಾಂಡಿಸ್, ರಾಮಕೃಷ್ಣ ಹೆಗಡೆ, ಭಾರತೀಯ ಜನತಾಪಕ್ಷ ಹಾಗೂ ಕಾಂಗ್ರೆಸ್‌ನ ಕೆಲವು ನಾಯಕರು ಸಂಚು ಹೂಡಿದ್ದಾರೆ. ಆದರೆ ತಮ್ಮನ್ನು ರಾಜಕೀಯವಾಗಿ ಮುಗಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಹಾಸನ ಲೋಕಸಭಾ ಅಭ್ಯರ್ಥಿಯಾದ ಎಚ್.ಡಿ. ದೇವೇಗೌಡ ಇಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.