ADVERTISEMENT

ಬುಧವಾರ, 13–4–1994

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST

ಗ್ಯಾಟ್ ವ್ಯವಸ್ಥೆಯಿಂದ ಅನುಕೂಲ
ಮರಕೇಶ್, ಮೊರಾಕ್ಕೊ, ಏ. 12 (ಪಿಟಿಐ)– ಉರುಗ್ವೆ ಸುತ್ತಿನ ಮಾತುಕತೆಯ ಅಂತಿಮ ಕರಡು ವಿಧಿಸುವ ನಿಯಮಗಳ ಮೇಲೆ ಆಧಾರಿತವಾದ ವಿಶ್ವ ವ್ಯಾಪಾರ ವ್ಯವಸ್ಥೆಯಿಂದ ಅಭಿವೃದ್ಧಿಶೀಲ ದೇಶವಾದ ಭಾರತವು ಬಹಳ ಪ್ರಯೋಜನ ಹೊಂದಲಿದೆ ಎಂದು ವಾಣಿಜ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಳು ವರ್ಷ ಕಾಲ ಜರುಗಿದ ಸಂಧಾನಗಳ ಫಲವಾಗಿ ರೂಪುಗೊಂಡಿರುವ ವಿಶ್ವ ವ್ಯಾಪಾರ ನಿಯಮಗಳಿಗೆ ಇಲ್ಲಿ ಸೇರಿರುವ 115 ದೇಶಗಳ ವಾಣಿಜ್ಯ ಸಚಿವರು ಸಹಿ ಮಾಡಲಿದ್ದು ಸಚಿವರ ಚಾರಿತ್ರಿಕ ಸಮಾವೇಶ ಇಂದು ಅದ್ಧೂರಿಯಾಗಿ ಪ್ರಾರಂಭವಾಯಿತು. ಈ ತಿಂಗಳ 15ರಂದು ಅದು ಮುಕ್ತಾಯಗೊಳ್ಳಲಿದ್ದು ಒಪ್ಪಂದವು 1995ರ ಜುಲೈ ವೇಳೆಗೆ ಜಾರಿಗೆ ಬರುವುದೆಂದು ನಿರೀಕ್ಷಿಸಲಾಗಿದೆ. ಗ್ಯಾಟ್ ಸಂಸ್ಥೆಯು 1995ರ ಜನವರಿ 1ರಂದು ಅಸ್ತಿತ್ವಕ್ಕೆ ಬರಲಿದೆ.

ಪರೋಕ್ಷ ಧೂಮಪಾನ
ನವದೆಹಲಿ, ಏ. 12 (ಯುಎನ್ಐ)– ಪರೋಕ್ಷ ಧೂಮಪಾನವು ಮಕ್ಕಳಲ್ಲಿ ಅಸ್ತಮಾ ವ್ಯಾಧಿ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಹೃದಯ ಆರೋಗ್ಯ ಪ್ರತಿಷ್ಠಾನದ (ಎಚ್‌ಸಿಎಫ್) ಅಧ್ಯಕ್ಷ ಕೆ.ಎಲ್. ಶರ್ಮಾ ಅವರು ‘ಬಾಲ್ಯದಲ್ಲಿ ಅಸ್ತಮಾ’ ಎಂಬ ವಿಷಯದ ಮೇಲೆ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.