ADVERTISEMENT

50 ವರ್ಷಗಳ ಹಿಂದೆ| ಶುಕ್ರವಾರ 27–2–1970

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 20:01 IST
Last Updated 26 ಫೆಬ್ರುವರಿ 2020, 20:01 IST

ಲೋಕಸಭೆಯಲ್ಲಿ ಭಾರಿ ಗೊಂದಲ: ಪ್ರಥಮವಾಗಿ ಘೋಷಣೆಗಳ ಚಕಮಕಿ

ನವದೆಹಲಿ, ಫೆ. 26– ದೇಶದ ವಿವಿಧ ಭಾಗಗಳಲ್ಲಿರುವ ವಿದೇಶಿ ವಾರ್ತೆ ಮತ್ತು ಸಂಸ್ಕೃತಿ ಕೇಂದ್ರಗಳನ್ನು ಮುಚ್ಚಲು ಕೇಂದ್ರ ವಿದೇಶಾಂಗ ಸಚಿವ ಶಾಖೆ ಕೈಗೊಂಡಿರುವ ನಿರ್ಧಾರ ಇಂದು ಲೋಕಸಭೆಯಲ್ಲಿ ಸುಮಾರು ಐವತ್ತು ನಿಮಿಷಗಳ ಕಾಲ ಕೋಲಾಹಲವುಂಟುಮಾಡಿತು. ಲೋಕಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸದಸ್ಯರು ಎರಡು ಗುಂಪುಗಳಾಗಿ ಘೋಷಣೆ– ಪ್ರತಿಘೋಷಣೆಗಳನ್ನು ಹಾಕಿದರು.

ವಿದೇಶಾಂಗ ಸಚಿವ ಶಾಖೆ ಕೈಗೊಂಡಿರುವ ಈ ನಿರ್ಧಾರವನ್ನು ಇಂದು ಚರ್ಚಿಸಿದಾಗ ಲೋಕಸಭೆ ಗಲಭೆ, ಗೊಂದಲದಲ್ಲಿ ಮುಳುಗಿ ಹೋಗಿತ್ತು. ಕೋಪೋದ್ರಿಕ್ತ ಸದಸ್ಯರು ಭಾವಾಭಿನಯದಿಂದ ಘೋಷಣೆ ಕೂಗುತ್ತ ಪರಸ್ಪರ ಹುಯಿಲೆಬ್ಬಿಸಿದರು.

ADVERTISEMENT

ಕೇಂದ್ರದ ಸಲಹೆಗಳಲ್ಲಿ ಕಾಸರಗೋಡಿನ ಪ್ರಸ್ತಾಪ ಇಲ್ಲವೆಂದುಮೇಲ್ಮನೆ ಟೀಕೆ

ಬೆಂಗಳೂರು, ಫೆ. 26– ರಾಜ್ಯದ ಗಡಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರವು ಮಾಡಿದೆಯೆಂದು ವರದಿಯಾಗಿರುವ ಸಲಹೆಗಳಲ್ಲಿ ಕಾಸರಗೋಡಿನ ಬಗ್ಗೆ ಪ್ರಸ್ತಾಪವಿಲ್ಲದಿರುವುದನ್ನು ಇಂದು ಮೇಲ್ಮನೆಯಲ್ಲಿ ಸದಸ್ಯರು ಟೀಕಿಸಿದರು.

ಗಡಿ ಸಮಸ್ಯೆ ಕುರಿತ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು, ಗಡಿ ಸಮಸ್ಯೆ ಪರಿಹಾರದಲ್ಲಿ ಕೇಂದ್ರಕ್ಕೆ ಆಸಕ್ತಿ ಇದ್ದಿದ್ದರೆ ಮಹಾಜನ್‌ ಆಯೋಗದ ಕಾರ್ಯವ್ಯಾಪ್ತಿಗೊಳಪಟ್ಟಿದ್ದ ಮೈಸೂರು– ಕೇರಳ ಗಡಿ ಸಮಸ್ಯೆಯನ್ನೂ ಬಗೆಹರಿಸ
ಬೇಕಾಗಿತ್ತೆಂದು ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.