ಮತ್ತೆ ಮಹಾರಾಷ್ಟ್ರ ಕೆದಕಿದ ಗಡಿ ತಂಟೆ
ಬೆಳಗಾವಿ ಮಾರ್ಚಿ 29– ಕರ್ನಾಟಕ– ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿ ಮನೋಹರ ಜೋಶಿ ಅವರು ಮಹಾರಾಷ್ಟ್ರದಿಂದ ಸರ್ವಪಕ್ಷಗಳ ನಿಯೋಗವೊಂದನ್ನು ಶೀಘ್ರವೇ ದೆಹಲಿಗೆ ಕರೆದುಕೊಂಡು ಹೋಗಲು ಆಲೋಚಿಸಿದ್ದಾರೆ.
ಕರ್ನಾಟಕದಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂ.ಇ.ಎಸ್) ಕೆಲ ನಾಯಕರನ್ನೂ ಈ ನಿಯೋಗ ಒಳಗೊಳ್ಳಲಿದೆ ಎಂದು ಸಮಿತಿಗೆ ಸಮೀಪವಾಗಿರುವ ಮೂಲಗಳಿಂದ ತಿಳಿದುಬಂದಿದೆ.
ಈ ನಿಯೋಗದ ಸದಸ್ಯರ ಅಂತಿಮಪಟ್ಟಿಯು ಮನೋಹರ ಜೋಶಿಯವರು ಮುಂಬೈಯಲ್ಲಿ ನಾಳೆ ಎಂ.ಇ.ಎಸ್ ನಾಯಕರನ್ನು ಭೇಟಿ ಮಾಡಿದಾಗ ಸಿದ್ಧಗೊಳ್ಳುವ ಸಂಭವವಿದೆ.
ಠಾಕ್ರೆ ಹೇಳಿಕೆಗೆ ಉಗ್ರ ಪ್ರತಿಭಟನೆ; ವಿವಾದ ಕೇಂದ್ರದ ಪರಿಶೀಲನೆಯಲ್ಲಿ
ನವದೆಹಲಿ, ಮಾರ್ಚಿ 29 (ಪಿಟಿಐ, ಯುಎನ್‌ಐ)– ತಮಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳ ನಿರ್ದಿಷ್ಟ ಸಮುದಾಯವನ್ನು ನಿರ್ನಾಮ ಮಾಡುವುದಾಗಿ ಶಿವಸೇನಾ ನಾಯಕ ಬಾಳಾ ಠಾಕ್ರೆ ಅವರು ಬೆದರಿಕೆ ಹಾಕಿದ್ದಾರೆ ಎಂಬ ವರದಿಯ ಬಗ್ಗೆ ಕೇಂದ್ರ ಗೃಹ ಖಾತೆ ಪರಿಶೀಲಿಸುತ್ತಿದೆ. ಈ ಮಧ್ಯೆ ಠಾಕ್ರೆ ಹೇಳಿಕೆಗೆ ಎಲ್ಲೆಡೆಯಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.