ADVERTISEMENT

ಶನಿವಾರ 14–5–1994

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:44 IST
Last Updated 13 ಮೇ 2019, 19:44 IST

ಬಹುಪಕ್ಷೀಯ ಸಭೆಗೆ ಭಾರತ ಅಸಮ್ಮತಿ

ನವದೆಹಲಿ, ಮೇ 13 (ಪಿಟಿಐ)– ದಕ್ಷಿಣ ಏಷ್ಯದಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಂಬಂಧಿಸಿದಂತೆ ಬಹುಪಕ್ಷೀಯ ಸಭೆ ನಡೆಸುವ ಅಮೆರಿಕದ ಉದ್ದೇಶವನ್ನು ಭಾರತ ಒಪ್ಪದು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಭೇಟಿಯ ವೇಳೆ ಅಮೆರಿಕಕ್ಕೆ ತಿಳಿಸಲಾಗುವುದು.

ದೂರವಾಣಿ – ಖಾಸಗಿಗೆ ಅವಕಾಶ

ADVERTISEMENT

ನವದೆಹಲಿ, ಮೇ 13 (ಯುಎನ್‌ಐ, ಪಿಟಿಐ)– ಜನರಿಗೆ ಮೂಲಭೂತ ದೂರವಾಣಿ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಖಾಸಗಿ ವಲಯಕ್ಕೂ ಅವಕಾಶ ನೀಡಲು ಸರ್ಕಾರ ಇಂದು ನಿರ್ಧರಿಸಿತು. ಈ ಮೂಲಕ ದೂರಸಂಪರ್ಕ ವ್ಯವಸ್ಥೆಯ ಮೇಲಿನ ಸರ್ಕಾರದ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಸಂಪರ್ಕ ಖಾತೆಯ ರಾಜ್ಯ ಸಚಿವ ಸುಖರಾಮ್ ಈ ನೀತಿಯನ್ನು ಲೋಕಸಭೆಯಲ್ಲಿ ಮಂಡಿಸಿದರು.

ಎಲ್ಲ ಪಟ್ಟಣ ಪ್ರದೇಶಗಳಲ್ಲಿ 1997ರ ವೇಳೆಗೆ ಕೇಳಿದವರಿಗೆಲ್ಲ ದೂರವಾಣಿ ಸಂಪರ್ಕ ನೀಡಲು ಈ ನಿರ್ಧಾರದಿಂದ ಸಾಧ್ಯವಾಗುವುದು ಎಂದು ಸರ್ಕಾರ ಆಶಿಸಿದೆ. ಜತೆಗೆ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ದೂರವಾಣಿ ಸೌಲಭ್ಯ ಒದಗಿಸಲು ಮತ್ತು ಪ್ರತಿ 500 ಜನರಿಗೆ ಒಂದು ಸಾರ್ವಜನಿಕ ದೂರವಾಣಿ ಬೂತ್ ದೊರಕಿಸಿಕೊಡಲು ಸರ್ಕಾರ ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.