ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 2 ಜೂನ್ 1998

ಪ್ರಜಾವಾಣಿ ವಿಶೇಷ
Published 1 ಜೂನ್ 2023, 21:40 IST
Last Updated 1 ಜೂನ್ 2023, 21:40 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಆದಾಯ ತೆರಿಗೆ ಮಿತಿ ಏರಿಕೆ: ಪೆಟ್ರೋಲ್ ದುಬಾರಿ

ನವದೆಹಲಿ, ಜೂನ್‌ 1 (ಪಿಟಿಐ, ಯುಎನ್‌ಐ)– ಪೆಟ್ರೋಲ್, ಅಂಚೆಪತ್ರ, ಪಾರ್ಸೆಲ್‌ ಹಾಗೂ ಸಿಗರೇಟು ಇನ್ನಷ್ಟು ತುಟ್ಟಿ, ವೈಯಕ್ತಿಕ ವರಮಾನ ತೆರಿಗೆ ವಿನಾಯಿತಿ ಮಿತಿ ಅಲ್ಪ ಏರಿಕೆ, ಫ್ಲಾಪಿ, ಸಿಡಿ ರಾಂ ಹಾಗೂ ಡಿಸ್ಕ್‌ಗಳು ಅಗ್ಗ– ಇವುಗಳು ಹಣಕಾಸು ಸಚಿವ ಯಶವಂತ ಸಿನ್ಹಾ ಮಂಡಿಸಿದ ಪೂರ್ಣಾವಧಿ ಬಜೆಟಿನ ಮುಖ್ಯಾಂಶಗಳು.

ಸಿನ್ಹಾ ಅವರು ಇಂದು ಮಂಡಿಸಿದ 1998–99ನೇ ಸಾಲಿನ ತಮ್ಮ ಪೂರ್ಣಾವಧಿ ಬಜೆಟಿನಲ್ಲಿ ಸಂಪನ್ಮೂಲ ಖೋತಾ ತುಂಬಿಸಿಕೊಳ್ಳಲು ಪೆಟ್ರೋಲಿನ ಬೆಲೆಯನ್ನು ಲೀಟರಿಗೆ ಒಂದು ರೂಪಾಯಿ ಏರಿಸದ್ದಲ್ಲದೆ ಅಂತರ್ದೇಶೀಯ ಅಂಚೆ ಪತ್ರದ ಬೆಲೆಯನ್ನು 50 ಪೈಸೆಗಳಷ್ಟು ಏರಿಸಿದರು. ಅಂಚೆ ಪಾರ್ಸಲ್‌ ವೆಚ್ಚವೂ ಏರುವುದು, ವರಮಾನ ತೆರಿಗೆಯ ವಿನಾಯಿತಿ ಮಿತಿಯನ್ನು 40 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಏರಿಸಿದ್ದಲ್ಲದೆ ಸ್ಟಾಂಡರ್ಡ್ ಡಿಡಕ್ಷನ್‌ ಮೊತ್ತವನ್ನು ಒಂದು ಲಕ್ಷದೊಳಗೆ ಸಂಬಳ ಪಡೆಯುತ್ತಿರುವವರಿಗೆ 20 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳಿಗೆ ಏರಿಸಿದರು.

ADVERTISEMENT

ಸಿಗರೇಟಿನ ತೆರಿಗೆಯನ್ನು ಏರಿಸಲಾಗಿದ್ದರೂ ಬೆಂಕಿಪೊಟ್ಟಣ ಅಗ್ಗವಾಗಲಿದೆ. ಸಿನಿಮಾ ಉದ್ಯಮ, ವೃತ್ತಪತ್ರಿಕೆಗಳಿಗೆ ಪರಿಹಾರ ನೀಡಲಾಗಿದೆ.

ವರಮಾನ ಮಾಹಿತಿ ಸಲ್ಲಿಸುವ ವಿಧಾನವನ್ನು ಸರಳಗೊಳಿಸಿರುವುದು, ವರಮಾನ ತೆರಿಗೆಯ ಮರುಪಾವತಿ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಕ್ರಮ ಹಾಗೂ ಪ್ರಾಮಾಣಿಕ ತೆರಿಗೆದಾರರಿಗೆ ಮನ್ನಣೆ ಇವುಗಳು ಹೊಸ ಬಜೆಟಿನ ಇತರ ಮಹತ್ವದ ಅಂಶಗಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.