ADVERTISEMENT

25 ವರ್ಷಗಳ ಹಿಂದೆ: ಬುಧವಾರ 5.11.1997

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:45 IST
Last Updated 4 ನವೆಂಬರ್ 2022, 19:45 IST
   

ಶರಣಾಗಲು ವೀರಪ್ಪನ್‌ಗೆ ಮತ್ತೊಂದು ಅವಕಾಶ

ಚೆನ್ನೈ, ನ.4– ‘ವೀರಪ್ಪನ್ ಬಂಧನಕ್ಕೆ ಜಂಟಿ ಕಾರ್ಯಾಚರಣೆ ನಡೆಸಲು ಕರ್ನಾಟಕ ಹಾಗೂ ತಮಿಳುನಾಡು ನಿರ್ಧರಿಸಿದ್ದರೂ ಆತನ ಶರಣಾಗತಿಗೆ ಇನ್ನೂ ಕಾಲ ಮಿಂಚಿಲ್ಲ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿದ್ದಾರೆ.

ಉಭಯ ರಾಜ್ಯಗಳ ಜಂಟಿ ಪಡೆಯ ಕಾರ್ಯಾಚರಣೆಗೆ ಸಕಲ ಸಿದ್ಧತೆಗಳು ನಡೆ ಯುತ್ತಿದ್ದು ಕಾರ್ಯಾಚರಣೆ ಸದ್ಯದಲ್ಲೇ ಆರಂಭವಾಗಲಿದೆ. ಆದರೂ ವೀರಪ್ಪನ್ ಶರಣಾಗಲು ಬಯಸಿದರೆ ಮತ್ತೊಂದು ಅವಕಾಶ ಕೊಡಲಾಗುವುದು ಎಂದು ಕರುಣಾ ನಿಧಿ ಅವರು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಕಳೆದ ಆಗಸ್ಟ್‌ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಸೂಚಿಸಿದ 8 ಅಂಶಗಳ ಸೂತ್ರವನ್ನು ಒಪ್ಪಿಕೊಂಡು ಶರಣಾಗಲು ವೀರಪ್ಪನ್‌ಗೆ ಈಗಲೂ ಕಾಲ ಮಿಂಚಿಲ್ಲ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಆತನ ಶರಣಾಗತಿಗೆ ಒಪ್ಪಿರುವುದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಗೌಡರ ‘ಅನುಗ್ರಹ’ಕ್ಕೆ ನೂಕುನುಗ್ಗಲು

ಬೆಂಗಳೂರು, ನ. 4– ರಾಜ್ಯ ಮಂತ್ರಿ ಮಂಡಲ ಪುನರ್‌ರಚನ್ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಭೇಟಿಗಾಗಿ ಕಳೆದ ಎರಡು ದಿನಗಳಿಂದ ‘ಅನುಗ್ರಹ’ದಲ್ಲಿ ಸಚಿವರು ಮತ್ತು ಶಾಸಕರ ‘ನೂಕುನುಗ್ಗಲು’ ವಾತಾವರಣ ಏರ್ಪಟ್ಟಿದೆ.

ಪ್ರಧಾನಿ ಪಟ್ಟ ಹೋದ ಮೇಲೆ ಬೆಂಗ ಳೂರಿಗೆ ಬಂದಾಗ ಆರಂಭದಲ್ಲಿ ಒಂದೆರಡು ಬಾರಿ ಬಿಟ್ಟರೆ, ತಮ್ಮನ್ನು ನೋಡಲು ಸಚಿವರು, ಶಾಸಕರು, ಪಕ್ಷದ ಹಿರಿಯರು ಬಾರದೆ ನಿರ್ಲಕ್ಷ್ಯ ಭಾವನೆ ತಾಳಿದ್ದಾರೆಂಬ ಅಭಿಪ್ರಾಯ ಗೌಡರಲ್ಲಿ ಮೂಡಿತ್ತು. ಆದರೆ ಅದರಲ್ಲೂ ಸಂಪುಟ ಪುನರ್‌ರಚನೆ ಆಗಲಿದೆ ಎಂಬ ವದಂತಿ ದಟ್ಟವಾಗುತ್ತಿದ್ದಯಂತೆಯೇ ಗೌಡರನ್ನು ಭೇಟಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಮಾಜಿ ಪ್ರಧಾನಿಗಳು ತಮ್ಮ ಪುತ್ರ, ಸಚಿವ ಎಚ್‌.ಡಿ. ರೇವಣ್ಣನವರ ಅಧಿಕೃತ ನಿವಾಸ ‘ಅನುಗ್ರಹ’ದಲ್ಲಿ ಮೊಕ್ಕಾಂ ಮಾಡಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಹೊಂದಿದ್ದ ಈ ಗೃಹವನ್ನು ಅವರ ಮಗ ಉಳಿಸಿಕೊಂಡಿ ದ್ದಾರೆ.

ತಮಿಳುನಾಡಿನಲ್ಲಿ ಮಳೆಗೆ 85 ಬಲಿ

ಚೆನ್ನೈ, ನ. 4 (ಪಿಟಿಐ)– ಕಳೆದ ಎರಡು ದಿನಗಳಿಂದ ಇಲ್ಲಿ ಭಾರಿ ಮಳೆ ಬೀಳುತ್ತಿದ್ದು, ಪ್ರಸಕ್ತ ಮುಂಗಾರು ಅವಧಿಯಲ್ಲಿ ತಮಿಳುನಾಡಿನಲ್ಲಿ ಮಳೆಯಿಂದಾಗಿ ಸತ್ತವರ ಸಂಖ್ಯೆ 85ಕ್ಕೆ ಏರಿದೆ.

ಮಳೆಯಲ್ಲಿ ಸತ್ತವರ ಸಂಖ್ಯೆ ಹೆಚ್ಚಿದ್ದರೂ ಯಾವುದೇ ರೀತಿಯ ಬೆಳೆ ಹಾನಿ ಆಗಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ಬಹುತೇಕ ಸಾವುಗಳು ಗುಡುಗು, ಸಿಡಿಲು ಬಡಿದು ಮತ್ತು ಗೋಡೆ ಕುಸಿತದಿಂದ ಸಂಭವಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡಿನ ಬಹುತೇಕ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.