25 ವರ್ಷಗಳ ಹಿಂದೆ ಈ ದಿನ
ಪಿಯುಸಿ: ಮಾನದಂಡ ಆಗಲಿರುವ ಆರು ಅಂಕ
ಬೆಂಗಳೂರು, ಜೂನ್ 19– ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 6ಕ್ಕಿಂತ ಕಡಿಮೆ ಅಂಕಗಳು ಬಂದರೆ, ಅಂಥ ವಿದ್ಯಾರ್ಥಿಗೆ ಮೊದಲು ಬಂದ ಶೇಕಡಾವಾರು ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸ ಮಾಡದಿರಲು ಪದವಿಪೂರ್ವ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯ ಫಲಿತಾಂಶದಲ್ಲಿ ಹೆಚ್ಚಳ (ಕಡಿತ) ಆಗಬೇಕಿದ್ದರೆ ಮರು ಮೌಲ್ಯಮಾಪನದ ಸಂದರ್ಭದಲ್ಲಿ ವಿದ್ಯಾರ್ಥಿಗೆ ಕನಿಷ್ಠ ಆರು ಅಂಕಗಳು ಹೆಚ್ಚಾಗಿ ಬಂದಿರಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.