
ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಕಾರ
ನವದೆಹಲಿ, ನ. 7– ವೀರಪ್ಪನ್ ಸಹಚರರೆನ್ನಲಾದ 51 ಕೈದಿಗಳ ಮೇಲಿನ ಟಾಡಾ ಆರೋಪ ಮತ್ತು ಪ್ರತ್ಯೇಕವಾದಿ ಸಂಘಟನೆಗೆ ಸೇರಿದವರೆನ್ನಲಾದ ಐವರು ಉಗ್ರಗಾಮಿಗಳ ಮೇಲಿನ ಟಾಡಾ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯ ಆರೋಪಗಳನ್ನು ಕೈಬಿಟ್ಟಿರುವ ಮೈಸೂರು ಮತ್ತು ತಮಿಳುನಾಡು ವಿಶೇಷ ನ್ಯಾಯಾಲಯಗಳ ಆದೇಶಗಳನ್ನು ಇಂದು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಎರಡೂ ಸರ್ಕಾರಗಳನ್ನು ತೀವ್ರವಾಗಿ ವಾಗ್ದಂಡನೆಗೀಡು ಮಾಡಿದೆ.
ಅಪರಾಧ ದಂಡ ಸಂಹಿತೆಯ 321ನೇ ಸೆಕ್ಷನ್ ಪ್ರಕಾರ, ಟಾಡಾ ಆರೋಪಗಳನ್ನು ಹಿಂದಕ್ಕೆ ಪಡೆಯುವಾಗ ಎರಡೂ ಸರ್ಕಾರಗಳು ಭಯಭೀತಿಯಿಂದ ವರ್ತಿಸಿವೆಯೇ ಹೊರತು ಕಾನೂನನ್ನು ಪಾಲಿಸಿಲ್ಲ. ಟಾಡಾ ಆರೋಪ ವಾಪಸು ಪಡೆಯಲು ಮೈಸೂರು ವಿಶೇಷ ನ್ಯಾಯಾಲಯದ ಮುಂದೆ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನೋಡಿದರೆ, ಅದು ಆರೋಪಿಗಳ ಜತೆ ಮಾಡಿಕೊಂಡ ‘ಒಪ್ಪಂದದ ಕಂತೆ’ಯಂತೆ ಕಾಣುತ್ತದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.