ADVERTISEMENT

25 ವರ್ಷಗಳ ಹಿಂದೆ | ಅಂಬೇಡ್ಕರ್‌ ಪ್ರತಿಮೆಗೆ ಅವಮಾನ: ಸಿಒಡಿ ತನಿಖೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 0:28 IST
Last Updated 29 ಜೂನ್ 2025, 0:28 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಜೂನ್ 28 – ಬೀದರ್‌ ಜಿಲ್ಲೆಯ ಹುಮ್ಲಾಬಾದ್‌ನಲ್ಲಿ ಡಾ.ಅಂಬೇಡ್ಕರ್‌ ಪ್ರತಿಮೆಯ ಕನ್ನಡಕ ಕಿತ್ತು ಹಾಕಿ ವಿರೂಪಗೊಳಿಸಿರುವ ಘಟನೆಯ ಬಗ್ಗೆ ಸಿಒಡಿಯಿಂದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.

ಅಂಬೇಡ್ಕರ್‌ ಪ್ರತಿಮೆ ವಿರೂಪಗೊಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿದ ಯುವಕರ ಮೇಲೆ ಲಾಠಿ ಪ್ರಹಾರ ಮಾಡಿದ ಘಟನೆಯೂ ಸಿಒಡಿ ತನಿಖೆಗೆ ಒಳಪಡುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT