ADVERTISEMENT

25 ವರ್ಷಗಳ ಹಿಂದೆ | ವಿಮಾನ ದುರಂತ: ಪತ್ನಿಸಮೇತ ಕೆನಡಿ ಪುತ್ರ ಸಾವು?

ಪ್ರಜಾವಾಣಿ ವಿಶೇಷ
Published 19 ಜುಲೈ 2024, 1:56 IST
Last Updated 19 ಜುಲೈ 2024, 1:56 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ವಿಮಾನ ದುರಂತ: ಪತ್ನಿಸಮೇತ ಕೆನಡಿ ಪುತ್ರ ಸಾವು?

ಹಿಯಾನಿಸ್ಟೋರ್ಟ್ (ಮೆಸಾಚುಸೆಟ್ಸ್) ಜುಲೈ 18 (ರಾಯಿಟರ್ಸ್)– ಹತ್ಯೆಗೊಳಗಾದ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಪುತ್ರ ಜಾನ್ ಎಫ್ ಕೆನಡಿ (ಜೂನಿಯರ್) (38) ಅವರ ವಿಮಾನ ಅಪಘಾತ
ಕ್ಕೀಡಾಗಿದ್ದು, ಅವರು ಪತ್ನಿ ಹಾಗೂ ಅತ್ತಿಗೆಯ ಜತೆ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ. 

ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಇವರು ಹೋಗುತ್ತಿದ್ದರು.

ADVERTISEMENT

ಬಿಜೆಪಿ ಸಖ್ಯ ಬಿಡಲು ಹೆಗಡೆ,ಜಾರ್ಜ್‌ಗೆ ದಳ ಷರತ್ತು

ನವದೆಹಲಿ, ಜುಲೈ 18– ಭಾರತೀಯ ಜನತಾ ಪಕ್ಷದ ಬಾಂಧವ್ಯವನ್ನು ಕಳಚಿಕೊಂಡು
ಬರುವುದಾದರೆ ಮಾತ್ರ ಲೋಕಶಕ್ತಿ ಮತ್ತು ಸಮತಾ ಪಕ್ಷಗಳ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಈ ಎರಡು ಪಕ್ಷಗಳ ನಾಯಕರ ಜತೆ ಮಾತನಾಡಲು ಜನತಾದಳದ ರಾಜಕೀಯ ವ್ಯವಹಾರಗಳ ಸಮಿತಿಯು ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರಿಗೆ ಇಂದು ಇಲ್ಲಿ ಅಧಿಕಾರ ನೀಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.