
ಪ್ರಜಾವಾಣಿ ವಾರ್ತೆ
ನವದೆಹಲಿ, ಮೇ 18 (ಯುಎನ್ಐ, ಪಿಟಿಐ)– ಸೋನಿಯಾ ಗಾಂಧಿಗೆ ಬೆಂಬಲದ ಸಂಕೇತವಾಗಿ ಹಾಗೂ ಅವರ ಮನ ಒಲಿಸಲು ಎಲ್ಲಾ ಐಎಐಸಿಸಿ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಸರ್ಕಾರಗಳಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ನೂರಾರು ಮಂದಿ ಇಂದು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದರು. ಆದರೆ, ರಾತ್ರಿಯವರೆಗೆ ತಮ್ಮ ದೃಢ ನಿರ್ಧಾರಕ್ಕೇ ಗಟ್ಟಿಯಾಗಿ ಅಂಟಿಕೊಂಡಿರುವ ಸೋನಿಯಾ ಅವರು ರಾಜೀನಾಮೆ ವಾಪಸು ಪಡೆಯಲು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.