ADVERTISEMENT

25 ವರ್ಷಗಳ ಹಿಂದೆ ಈ ದಿನ: ‘ಲವ್‌ ವೈರಸ್‌’ ಹುಟ್ಟುಹಾಕಿದ ಶಂಕಿತನ ಗುರುತು ಪತ್ತೆ!

ಪ್ರಜಾವಾಣಿ ವಿಶೇಷ
Published 6 ಮೇ 2025, 20:16 IST
Last Updated 6 ಮೇ 2025, 20:16 IST
<div class="paragraphs"><p>25 ವರ್ಷಗಳ ಹಿಂದೆ ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

‘ಲವ್‌ ವೈರಸ್‌’ ಹುಟ್ಟುಹಾಕಿದ ಶಂಕಿತನ ಗುರುತು ಪತ್ತೆ!

ಮನಿಲಾ, ಮೇ 6 (ಎಎಫ್‌ಪಿ, ರಾಯಿಟರ್ಸ್‌)– ಜಗತ್ತಿನಾದ್ಯಂತ ಕಂಪ್ಯೂಟರ್‌ ಕಾರ್ಯಕ್ರಮಗಳನ್ನೆಲ್ಲ ಅಸ್ತವ್ಯಸ್ತಗೊಳಿಸುವಲ್ಲಿ ಸಫಲವಾಗಿರುವ ‘ಲವ್‌ ವೈರಸ್‌’ ಅನ್ನು ಹುಟ್ಟುಹಾಕಿದ ಶಂಕಿತನೊಬ್ಬನನ್ನು ಗುರುತಿಸಲಾಗಿದೆ ಎಂದು ಫಿಲಿಪ್ಪೀನ್ಸ್‌ನ ತನಿಖಾ ಅಧಿಕಾರಿಗಳು ಮತ್ತು ಇಂಟರ್‌ನೆಟ್‌ ಸೇವೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಮನಿಲಾದ ಪಂಡಕಾನ್‌ ಜಿಲ್ಲೆಯಲ್ಲಿನ ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಸೇರಿದ 23 ವರ್ಷದ ಯುವಕನೊಬ್ಬ ಈ ವೈರಸ್‌ ಸೃಷ್ಟಿಸಿರಬೇಕು ಎಂದು ಇಂಟರ್‌ನೆಟ್‌ನಲ್ಲಿ ಬಂದ ಸಂದೇಶಗಳನ್ನು ಆಧರಿಸಿ ಈ ಗುಮಾನಿ ಪಡಲಾಗಿದೆ.

ಗುರುವಾರ ಏಷ್ಯಾದಲ್ಲಿ ಮೊದಲು ಕಾಣಿಸಿಕೊಂಡ ‘ಐ ಲವ್‌ ಯು’ ವೈರಸ್‌ ಮಿಂಚಿನ ವೇಗದಲ್ಲಿ ಜಗತ್ತಿನ ಮೂಲೆ ಮೂಲೆಗಳಲ್ಲಿನ ಕಂಪ್ಯೂಟರ್‌ಗಳಿಗೆ ಹರಡುತ್ತಿದೆ. ಅಮೆರಿಕದಲ್ಲಿನ ಪ್ರಮುಖ ಕಂಪನಿಗಳು, ಪೆಂಟಗನ್‌, ಕೇಂದ್ರೀಯ ಗುಪ್ತಚರ ಇಲಾಖೆ ಹಾಗೂ ಬ್ರಿಟಿಷ್ ಪಾರ್ಲಿಮೆಂಟ್‌ ಈಗಾಗಲೇ ಇ–ಮೇಲ್‌ ವ್ಯವಸ್ಥೆಯನ್ನು ರದ್ದುಪಡಿಸಿವೆ.

ಲವ್‌ ವೈರಸ್‌ ಕಾಣಿಸಿಕೊಂಡಾಗಿನಿಂದ ಈವರೆಗೆ ಜಗತ್ತಿನಾದ್ಯಂತ 2.61 ಶತಕೋಟಿ ಡಾಲರ್‌ ಮೊತ್ತದ ಹಾನಿ ಉಂಟಾಗಿದೆ.

ವಿಚ್ಛೇದನ ಪಡೆಯದ ಮತಾಂತರ ಮದುವೆ ಅನೂರ್ಜಿತ: ಸುಪ್ರೀಂ ಕೋರ್ಟ್‌

ನವದೆಹಲಿ, ಮೇ 6 (ಯುಎನ್‌ಐ)– ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆಯದ ಹಿಂದೂ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ಎರಡನೇ ಮದುವೆಯಾದಲ್ಲಿ ಆ ಮದುವೆ ಅನೂರ್ಜಿತವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 494ರ ಅನ್ವಯ ಈ ಬಗೆಯ ಎರಡನೇ ಮದುವೆ ಅನೂರ್ಜಿತಗೊಳ್ಳುವುದು ಮತ್ತು ವ್ಯಕ್ತಿಯ ಕೃತ್ಯವನ್ನು ಅಪರಾಧವೆಂದು
ಪರಿಗಣಿಸಲಾಗುವುದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.