ADVERTISEMENT

25 ವರ್ಷದ ಹಿಂದೆ: ಸಿಇಟಿ ಪರೀಕ್ಷೆಗೆ ವಿಶೇಷ ರೈಲಿನಲ್ಲಿ ಬಂದ ಹೊರ ರಾಜ್ಯದ ದಂಡು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 23:00 IST
Last Updated 30 ಏಪ್ರಿಲ್ 2025, 23:00 IST
   

ಸಿಇಟಿ ಪರೀಕ್ಷೆಗೆ ವಿಶೇಷ ರೈಲಿನಲ್ಲಿ ಬಂದ ಹೊರ ರಾಜ್ಯದ ದಂಡು

ಬೆಂಗಳೂರು, ಏ. 30–  ರಾಜ್ಯಾದ್ಯಂತ ಮೇ 2 ಮತ್ತು 3ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಾಷ್ಟ್ರದಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ. ಈ ಬಾರಿಯ ಸಿಇಟಿ ಪರೀಕ್ಷೆಗೆ ಹೊರ ರಾಜ್ಯಗಳಿಂದ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳ ಮೊದಲ ದೊಡ್ಡ ತಂಡ ವಿಶೇಷ ರೈಲಿನಲ್ಲಿ ಹೆಹಲಿಯಿಂದ ನಗರಕ್ಕೆ ಆಗಮಿಸಿತು.

ಹೊರ ರಾಜ್ಯದ ವಿದ್ಯಾರ್ಥಿಗಳಿಗಾಗಿಯೇ ಬಿಡಲಾದ (ದೆಹಲಿ) ನಿಜಾಮುದ್ದೀನ್‌– ಬೆಂಗಳೂರು ವಿಶೇಷ ರೈಲಿನಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದಾಗ ಅವರ ಮುಖದಲ್ಲಿ ಬಳಲಿಕೆಯ ಜತೆಗೆ ಪರೀಕ್ಷಾ ಕುತೂಹಲವೂ ಕಾಣಿಸುತ್ತಿತ್ತು.

ಅತ್ಯಧಿಕ ಕೇಂದ್ರಗಳು ಬೆಂಗಳೂರುನಲ್ಲಿ ಅತ್ಯಧಿಕ (111) ಪರೀಕ್ಷಾ ಕೇಂದ್ರಗಳಿರುವುದರಿಂದ ಇಲ್ಲಿ ಈ ಜಾರಿ ಸಹಜವಾಗಿ ಅತ್ಯಧಿಕ ಸಂಖ್ಯೆಯ ಹೊರ ರಾಜ್ಯಗಳ ವಿದ್ಯಾರ್ಥಿಗಳು (31,353) ಪರೀಕ್ಷೆ ಬರೆಯಲಿದ್ದಾರೆ.

ADVERTISEMENT

ಗಾಯಕ ಅತ್ರಿ ಸೇರಿ 6 ಜನ ತುಂಗೆ ಪಾಲು

ಶೃಂಗೇರಿ, ಏ. 30– ಇಲ್ಲಿಗೆ ಸಮೀಪದ ಉಳಿವೆಬೈಲು ಬಳಿಯ ತುಂಗಾ ನದಿಯ ನೀರಿನ ಸುಳಿಗೆ ಸಿಲುಕಿ  ಇಂದು ಹೆಸರಾಂತ ಸಂಗೀತಗಾರ ಜೆ.ವಿ.ಅತ್ರಿ ಸೇರಿದಂತೆ ಕುಟುಂಬದ ಒಟ್ಟು ಆರು ಜನ ಮುಳುಗಿ ಮೃತಪಟ್ಟರು.

ಇಂದು ಮಧ್ಯಾಹ್ನ ಸುಮಾರು 12–30ರಲ್ಲಿ  ಈ ದುರಂತ ಸಂಭವಿಸಿದೆ.

ಉಳಿವೆಬೈಲು ಯುವಕ ಸಂಘವೊಂದರ ಬೆಳ್ಳಿಹಬ್ಬದ ಸಮಾರಂಭದಲ್ಲಿ ನಿನ್ನೆ ಅತ್ರಿಯವರು ಸಂಗೀತ ಕಾರ್ಯಕ್ರಮ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.