ADVERTISEMENT

25 ವರ್ಷಗಳ ಹಿಂದೆ ಶುಕ್ರವಾರ 7.2.1997

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:00 IST
Last Updated 6 ಫೆಬ್ರುವರಿ 2022, 20:00 IST
   

ಆಲಮಟ್ಟಿ ವಿವಾದ: ಮುಖ್ಯಮಂತ್ರಿಗಳ ಸಭೆ ಶೀಘ್ರ

ನವದೆಹಲಿ, ಫೆ. 6– ಆಲಮಟ್ಟಿ ಅಣೆಕಟ್ಟು ವಿವಾದ ಕುರಿತಂತೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಸಭೆಯೊಂದನ್ನು ಸದ್ಯದಲ್ಲಿಯೇ ಕರೆದು ಪರಸ್ಪರ ಮಾತುಕತೆ ಮೂಲಕ ಸಮಸ್ಯೆನ್ನು ಬಗೆಹರಿಸುವ ಪ್ರಯತ್ನ ಮಾಡಲು ಕೇಂದ್ರ ಜಲ ಸಂಪನ್ಮೂಲ ಸಚಿವ ಜನೇಶ್ವರ ಮಿಶ್ರ ಅವರು ನಿರ್ಧರಿಸಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.

ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಂ. ಅಹಮದಿ ಅವರ ನೇತೃತ್ವದ ನ್ಯಾಯಪೀಠವು ಕಳೆದ ಸೋಮವಾರ ನೀಡಿದ ತೀರ್ಪು ಮತ್ತು ಸಂಯುಕ್ತ ರಂಗಗಳ ಚಾಲನಾ ಸಮಿತಿಯ ನಾಲ್ವರು ಮುಖ್ಯಮಂತ್ರಿಗಳ ಸಮಿತಿಯು ನೇಮಕ ಮಾಡಿದ್ದ ತಜ್ಞ ಸಮಿತಿಯು ನೀಡಿರುವ ವರದಿಯ ಹಿನ್ನೆಲೆಯಲ್ಲಿ ಜನೇಶ್ವರ ಮಿಶ್ರ ಅವರು ಈ ಕ್ರಮ ಕೈಗೊಂಡಿದ್ದಾರೆಂದು ಆ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.