ADVERTISEMENT

25 ವರ್ಷಗಳ ಹಿಂದೆ | ಗುರುವಾರ, 7-8-1997

ಪ್ರಜಾವಾಣಿ ವಿಶೇಷ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
   

ಸಂಸತ್ತಿನಲ್ಲಿ ವಿಮಾಮಸೂದೆ ವಾಪಸು

ನವದೆಹಲಿ, ಆಗಸ್ಟ್‌ 6 (ಪಿಟಿಐ, ಯುಎನ್‌ಐ)– ವಿಮಾ ಕ್ಷೇತ್ರದಲ್ಲಿ ವಿದೇಶಿ ಕಂಪೆನಿಗಳಿಗೆ ಅವಕಾಶ ನೀಡುವುದಕ್ಕೆ ಭಾರತೀಯ ಜನತಾ ಪಕ್ಷ ಮತ್ತು ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಲೋಕಸಭೆಯಲ್ಲಿ ಇಂದು ಸಂಯುಕ್ತ ರಂಗ ಸರ್ಕಾರಕ್ಕೆ ಇರುಸುಮುರುಸು ಉಂಟಾಯಿತಲ್ಲದೇ ವಿಮೆ ನಿಯಂತ್ರಣ ಪ್ರಾಧಿಕಾರವನ್ನು ವಾಪಸು ಪಡೆಯಬೇಕಾಯಿತು.

ಹಣಕಾಸು ಸಚಿವ ಪಿ. ಚಿದಂಬರಂ ಅವರು ಸೋಮವಾರ ಮಂಡಿಸಿದ ಈ ಮಸೂದೆಯನ್ನು ಇಂದು ಮತಕ್ಕೆ ಹಾಕಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಒಮ್ಮತ ಮೂಡಿಸಲು ಸರ್ಕಾರ ಯತ್ನಿಸುವುದಾಗಿ ಪ್ರಕಟಿಸಿದ ಐ.ಕೆ. ಗುಜ್ರಾಲ್‌ ಅವರು ಮಸೂದೆ ವಾಪಸು ಪಡೆಯುವುದಾಗಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.