ADVERTISEMENT

25 ವರ್ಷಗಳ ಹಿಂದೆ | ಬುಧವಾರ 31–5–1995

​ಪ್ರಜಾವಾಣಿ ವಾರ್ತೆ
Published 30 ಮೇ 2020, 21:13 IST
Last Updated 30 ಮೇ 2020, 21:13 IST

ಕಾಂಗೈ ಮುನ್ನಡೆ: ಆಂಟನಿ ಗೆಲುವು
ನವದೆಹಲಿ, ಮೇ 30 (ಪಿಟಿಐ, ಯುಎನ್‌ಐ): ವಿವಿಧ ರಾಜ್ಯಗಳ ವಿಧಾನ ಸಭಾ ಉಪ ಚುನಾವಣೆಗಳಲ್ಲಿ ಇಂದು ಮಧ್ಯ ರಾತ್ರಿವರೆಗೆ ಫಲಿತಾಂಶ ಪ್ರಕಟವಾದ 18 ಸ್ಥಾನಗಳ ಪೈಕಿ 9ನ್ನು ಗೆದ್ದುಕೊಂಡಿರುವ ಕಾಂಗೈ ತನ್ನ ಮುನ್ನಡೆ ಉಳಿಸಿಕೊಂಡಿದೆ. ಕೇರಳದ ಪ್ರತಿಷ್ಠಿತ ತಿರೂರಂಗಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎ.ಕೆ. ಆಂಟನಿ ಅವರು ಪ್ರತಿಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಡಾ. ಎನ್‌.ಎ. ಕರೀಂ ಅವರನ್ನು 22 ಸಾವಿರಕ್ಕೂ ಹೆಚ್ಚು ಮತಗಳ ಭಾರಿ ಅಂತರದಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.