ADVERTISEMENT

ಭಾನುವಾರ, 24–7–1994

ಭಾನುವಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 17:18 IST
Last Updated 23 ಜುಲೈ 2019, 17:18 IST

ಹಿಂದುಳಿದವರಿಗೆ ಮೀಸಲು ಶೇ 57ಕ್ಕೆ ಏರಿಕೆ: ಸಂಪುಟ ನಿರ್ಧಾರ ತಕ್ಷಣ ಜಾರಿ

ಬೆಂಗಳೂರು, ಜುಲೈ 23– ಒಕ್ಕಲಿಗ ಜನಾಂಗದ ತೀವ್ರ ಪ್ರತಿಭಟನೆಯಿಂದ ಹಿಂಜರಿದಂತಾಗಿ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಎಂಬಂತೆ ರಾಜ್ಯ ಸರ್ಕಾರವು ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸಿನ ಅನ್ವಯ ಇತ್ತೀಚೆಗೆ ಹೊರಡಿಸಿದ್ದ ಮೀಸಲು ನೀತಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದುಳಿದ ವರ್ಗಗಳಿಗೆ ಮೀಸಲು ಪ್ರಮಾಣವನ್ನು ಶೇ 50ರಿಂದ 57ಕ್ಕೆ ಹೆಚ್ಚಿಸಿದೆ.

ರಾಜ್ಯ ಸರ್ಕಾರದ ಈ ನಿರ್ಧಾರ ದಿಂದಾಗಿ ಪರಿಶಿಷ್ಟ ಜಾತಿ ಮತ್ತು ವರ್ಗ ದವರಿಗೆ ಇರುವ ಶೇ 23ರಷ್ಟು ಮೀಸಲು ಸೇರಿ ಒಟ್ಟು ಇದರ ಪ್ರಮಾಣ ಶೇ 80ರಷ್ಟು ಆಗುತ್ತದೆ. ಇದು ಹಿಂದೆಂದೂ ಕೈಗೊಳ್ಳದೇ ಇರುವಂತಹ ಪ್ರಗತಿಪರ ನೀತಿಯಾಗಿದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಹೇಳಿದರು.

ADVERTISEMENT

ರಾಜಕೀಯ ಪ್ರವೇಶ: ರಾಜ್‌ ನಿರಾಕರಣೆ

ರಾಯಚೂರು, ಜುಲೈ 23– ತಮಿಳುನಾಡಿನ ಎಂ.ಜಿ.ಆರ್. ಹಾಗೂ ಆಂಧ್ರ ಪ್ರದೇಶದ ಎನ್‌.ಟಿ. ರಾಮರಾವ್‌ ಮಾದರಿಯಲ್ಲಿ ತಾವು ರಾಜಕೀಯಕ್ಕೆ ಪ್ರವೇಶ ಮಾಡಲಿರು ವುದಾಗಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಸುದ್ದಿಗಳನ್ನು ನಟ ಡಾ. ರಾಜಕುಮಾರ್ ಅವರು ಖಡಾಖಂಡಿತವಾಗಿ ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.