ADVERTISEMENT

25 ವರ್ಷಗಳ ಹಿಂದೆ: ಆಂಧ್ರ: ಮಳೆಗೆ 130 ಬಲಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 1:09 IST
Last Updated 26 ಆಗಸ್ಟ್ 2025, 1:09 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಆಂಧ್ರ: ಮಳೆಗೆ 130 ಬಲಿ

ಹೈದರಾಬಾದ್‌, ಆಗಸ್ಟ್‌ 25 (ಪಿಟಿಐ)– ಆಂಧ್ರಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಅಧಿಕ ಮಳೆಗೆ ಬಲಿಯಾದವರ ಸಂಖ್ಯೆ 130ಕ್ಕೆ ಏರಿದೆ.

ಸೇನೆ ಮತ್ತು ಭಾರತೀಯ ವಾಯುಪಡೆ ನೀರಿನಿಂದ ಆವೃತವಾಗಿರುವ ಜನರ ರಕ್ಷಣೆ ಹಾಗೂ ಆಹಾರ ಪೂರೈಕೆ ಕಾರ್ಯದಲ್ಲಿ ನಿರತವಾಗಿವೆ. ನಿನ್ನೆ ರಾತ್ರಿಯಿಂದೀಚೆಗೆ ಮಳೆ ನೀರಿನಲ್ಲಿ ಹುದುಗಿದ್ದ 26 ದೇಹಗಳು ಪತ್ತೆಯಾಗಿವೆ.

ADVERTISEMENT

ಜೈಲಿನಿಂದ 6 ಕೈದಿಗಳ ಪರಾರಿ

ಹಾಸನ, ಆಗಸ್ಟ್‌ 25– ನಗರದಲ್ಲಿರುವ ಜಿಲ್ಲಾ ಉಪ ಕಾರಾಗೃಹದಿಂದ ಆರು ಮಂದಿ ವಿಚಾರಣಾಧೀನ ಕೈದಿಗಳು ರಾಜಾರೋಷವಾಗಿ ಮುಖ್ಯದ್ವಾರದ ಮೂಲಕವೇ ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಉಪ ಕಾರಾಗೃಹದ ನಾಲ್ಕು ದ್ವಾರಗಳನ್ನು ನಿರಾಯಾಸವಾಗಿ ದಾಟಿ ಹೊರಗೆ ಬಂದ ನಂತರ ಕೈದಿಗಳಾದ ಆದಿಲ್‌ ಷರೀಫ್‌, ತೇಜಸ್ವಿ, ಶ್ರೀನಿವಾಸ, ರಮೇಶ್‌, ಅಣ್ಣಪ್ಪ, ಮೋಹನ್‌ ಪರಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.