ADVERTISEMENT

25 ವರ್ಷಗಳ ಹಿಂದೆ: 26–10–1998- ದೇವೇಗೌಡ–ಬೊಮ್ಮಾಯಿ ರಹಸ್ಯ ಮಾತುಕತೆ

ಪ್ರಜಾವಾಣಿ ವಿಶೇಷ
Published 26 ಅಕ್ಟೋಬರ್ 2023, 0:24 IST
Last Updated 26 ಅಕ್ಟೋಬರ್ 2023, 0:24 IST
<div class="paragraphs"><p>25 ವರ್ಷಗಳ ಹಿಂದೆ</p></div>

25 ವರ್ಷಗಳ ಹಿಂದೆ

   

ಬೆಂಗಳೂರು, ಅ. 25-ಇದು ತಿಂಗಳು 29ರಿಂದ ಕರೆಯಲು ಉದ್ದೇಶಿಸಲಾಗಿದ್ದ ವಿಧಾನಮಂಡಲ ಅಧಿವೇಶನವನ್ನು ಮುಂದೂಡಬೇಕೆಂದು ಜನತಾ ದಳದ ವರಿಷ್ಠರು ನೀಡಿದ್ದ ಸೂಚನೆಯನ್ನು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವಾಗ ಶಾಸಕಾಂಗ ಪಕ್ಷದ ಸಭೆಯನ್ನೂ ನಡೆಸುವುದಿಲ್ಲ ಎಂದು ಪ್ರಕಟಿಸುವ ಮೂಲಕ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್ ಅವರು ಪಕ್ಷದ ವರಿಷ್ಠರಿಗೂ ಸಡ್ಡು ಹೊಡೆದು ಸಂಪೂರ್ಣ ಸಮರ ಸಾರಿದ್ದಾರೆ.

ADVERTISEMENT

ಇದರೊಂದಿಗೆ, ರಾಜ್ಯದಲ್ಲಿ ಆಡಳಿತ ಪಕ್ಷವಾದ ಜನತಾದಳದಲ್ಲಿ ಉಂಟಾಗಿರುವ ಬಿಕ್ಕಟ್ಟು ಅಂತಿಮ ಘಟ್ಟ ತಲುಪಿದ್ದು ಸರ್ಕಾರದ ಮೇಲೆ ಹಾಗೂ ಮುಖ್ಯಮಂತ್ರಿ ಪದವಿಯ ಮೇಲೆ ತೂಗುಕತ್ತಿ ತೂಗುತ್ತಿದೆ.

ದೇವೇಗೌಡ–ಬೊಮ್ಮಾಯಿ ರಹಸ್ಯ ಮಾತುಕತೆ 

ಬೆಂಗಳೂರು, ಅ. 25- ರಾಜ್ಯ ಜನತಾ ದಳದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯುವ ದಿಸೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರದ ಮಾಜಿ ಸಚಿವ ಎಸ್‌. ಆರ್ ಬೊಮ್ಮಾಯಿ ಅವರು ಇಂದು ಇಲ್ಲಿ ಪರಸ್ಪರ ಭೇಟಿಯಾಗಿ 'ರಹಸ್ಯ' ಮಾತುಕತೆ ನಡೆಸಿದರು.

ಶಾಸಕಾಂಗ ಪಕ್ಷದ ತುರ್ತು ಸಭೆ ಕರೆದು ವಿಶ್ವಾಸಮತ ಯಾಚಿಸಬೇಕೆಂದು ಜನತಾ ದಳದ ಸುಮಾರು ಐವತ್ತು ಮಂದಿ ಶಾಸಕರು ಮುಖ್ಯಮಂತ್ರಿ ಜೆ.ಎಚ್.ಪಟೇ‌ಲ್‌ ಅವರಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡ ರಾದ ದೇವೇಗೌಡ ಮತ್ತು ಬೊಮ್ಮಾಯಿ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ಮಹತ್ವದ ಬೆಳವಣಿಗೆಯಾಗಿದೆ. 

ಬೀದರ್: 2.50ಲಕ್ಷ ಡಕಾಯಿತಿ

ಬೀದರ್, ಅ. 25- ಇಲ್ಲಿಯ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿ ಕಾಲನಿಯಲ್ಲಿಯ ಡಾ.ವಿಶ್ವನಾಥ ನಾಗಶೆಟ್ಟೆಪ್ಪ ಪ್ರಭಾ ಅವರ ಮನೆಗೆ ಇಂದು ಬೆಳಗಿನ ಜಾವ 3 ಗಂಟೆಗೆ ನುಗ್ಗಿದ 5-6 ಜನ ಡಕಾಯಿತರು ಮನೆಯಲ್ಲಿದ್ದವರನ್ನು ಚಾಕುವಿನಿಂದ ಬೆದರಿಸಿ ಸುಮಾರು 2.50 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿಕೊಂಡು ಪರಾರಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.