ಪ್ರಾಥಮಿಕ ಶಿಕ್ಷಣ ಆರಂಭ
ಬೆಂಗಳೂರು, ಏ. 17 - ತೃತೀಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಜ್ಯದ 6 ವರ್ಷದಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವ ಸಂಬಂಧದಲ್ಲಿ ಏಕರೂಪದ ಶಾಸನವನ್ನು ರಚಿಸಲು ಸರ್ಕಾರ ತಯಾರಿಸಿರುವ 1961 ಮೈಸೂರು ಕಡ್ಡಾಯ ಪ್ರಾಥಮಿಕ ಶಿಕ್ಷಣ ಮಸೂದೆಯನ್ನು ವಿದ್ಯಾ ಶಾಖೆಯ ಉಪಸಚಿವೆ ಶ್ರೀಮತಿ ಗ್ರೇಸ್ ಟಕರ್ ಅವರು ಇಂದು ವಿಧಾನ ಸಭೆಯಲ್ಲಿ ಮಂಡಿಸಿದರು.
ಕೃಷ್ಣಾ - ಗೋದಾವರಿ ನೀರಿನ ಹಂಚಿಕೆ: ಶೀಘ್ರ ನಿರ್ಧಾರ
ನವದೆಹಲಿ, ಏ. 17 - ಕೃಷ್ಣಾ ಮತ್ತು ಗೋದಾವರಿ ನದಿಗಳ ನೀರಿನ ಹಂಚಿಕೆ ಬಗ್ಗೆ ಮುಂದಿನ ಕ್ರಮ ಕುರಿತು, ಇನ್ನು ಕೆಲವೇ ದಿನಗಳಲ್ಲಿ ಒಂದು ನಿರ್ಧಾರ ಕೈಗೊಳ್ಳಲಾಗುವುದು ಎಂಬುದಾಗಿ, ನೀರಾವರಿ ಹಾಗೂ ವಿದ್ಯುಚ್ಛಕ್ತಿ ಶಾಖೆ ಉಪ ಸಚಿವ ಶ್ರೀ ಜೈಸುಖಲಾಲ್ ಹಾಥಿಯವರು ಇಂದು ಲೋಕ ಸಭೆಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.