ADVERTISEMENT

ಶನಿವಾರ, 18–1–1969

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 20:00 IST
Last Updated 17 ಜನವರಿ 2019, 20:00 IST
   

ಕೃಷ್ಣಾ–ಕಾವೇರಿ ನೀರಾವರಿ ಯೋಜನೆ ಸಂಪನ್ಮೂಲ ಪತ್ತೆಗೆ ಶೀಘ್ರವೇ ಸಮಿತಿಯ ರಚನೆ: ಮುಖ್ಯಮಂತ್ರಿ

ಬೆಂಗಳೂರು, ಜ. 17– ಕಾವೇರಿ ಮತ್ತು ಕೃಷ್ಣಾ ನದಿ ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕೂಡಿಸುವ ಸಂಬಂಧದಲ್ಲಿ ಒಂದು ಸಮಿತಿಯನ್ನು ಶೀಘ್ರದಲ್ಲಿಯೇ ರಚಿಸಲಿರುವುದಾಗಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಕಾವೇರಿ ನದಿ ಪ್ರದೇಶಕ್ಕೆ ಸಂಬಂಧಿಸಿದ ಶಾಸಕರ ಸಭೆಯೊಂದನ್ನು ಕರೆದು ವಿಷಯ ಕುರಿತು ಈಗಾಗಲೇ ತಾವು ಚರ್ಚಿಸಿರುವುದಾಗಿ ಅವರು ತಿಳಿಸಿ ಆ ಬಗ್ಗೆ ಸಹಕಾರ ನೀಡಲು ವಿರೋಧ ಪಕ್ಷದ ಶಾಸಕರೂ ಭರವಸೆ ನೀಡಿದ್ದಾರೆಂದರು.

ADVERTISEMENT

ನಿಕ್ಸನ್‌ಗೆ ವಿಶೇಷ ರಕ್ಷೆ

ವಾಷಿಂಗ್‌ಟನ್, ಜ. 17– ರಿಚರ್ಡ್ ನಿಕ್ಸನ್ ಸೋಮವಾರ ಅಮೆರಿಕದ ಅಧ್ಯಕ್ಷ ಸ್ಥಾನವನ್ನಲಂಕರಿಸುವ ಸಮಾರಂಭದಲ್ಲಿ 12,000ಕ್ಕೂ ಹೆಚ್ಚು ಮಂದಿ ಎಫ್.ಬಿ.ಐ. ಏಜೆಂಟರು, ಪೊಲೀಸರು ನಿಕ್ಸನ್‌ಗೆ ರಕ್ಷಣೆಯನ್ನೊದಗಿಸುವರು.

ಶ್ವೇತ ಭವನದ ರಹಸ್ಯ ದಳದ 600 ಮಂದಿ ಅಧ್ಯಕ್ಷರ ಬೆಂಗಾವಲಿನ ಹೊಣೆ ಹೊತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಮೂವರು ಯಾತ್ರಿಗಳ ಸಮೇತ ಸೊಯುಜ್–4 ಧರೆಗೆ ವಾಪಸ್

ಮಾಸ್ಕೋ, ಜ. 17– ರಷ್ಯದ ಉಪಗ್ರಹ ಸೊಯುಜ್–4 ಇಂದು ಮೂವರು ಗಗನಯಾತ್ರಿಗಳೊಡನೆ ಸುರಕ್ಷಿತವಾಗಿ ಭೂಮಿಗೆ ವಾಪಸಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.