ADVERTISEMENT

ಶೇ 10 ರಷ್ಟು ಫ್ರಾಂಕ್ ಅಪಮೌಲ್ಯ? ಫ್ರೆಂಚ್ ಸಂಪುಟದಲ್ಲಿ ಇಂದು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 18:00 IST
Last Updated 22 ನವೆಂಬರ್ 2018, 18:00 IST

ಶೇ 10 ರಷ್ಟು ಫ್ರಾಂಕ್ ಅಪಮೌಲ್ಯ? ಫ್ರೆಂಚ್ ಸಂಪುಟದಲ್ಲಿ ಇಂದು ನಿರ್ಧಾರ

ಪ್ರಾರಿಸ್, ನ. 22– ಫ್ರಾನ್ಸ್ ತನ್ನ ಫ್ರಾಂಕ್ ನಾಣ್ಯವನ್ನು ಸುಮಾರು ಶೇಕಡ 10ರಷ್ಟು ಅಪಮೌಲ್ಯಗೊಳಿಸಲು ಒಪ್ಪಿಕೊಂಡಿದೆ ಎಂದು ಚೆನ್ನಾಗಿ ಬಲ್ಲ ವಲಯವೊಂದು ಇಂದು ತಿಳಿಸಿದೆ.

ಫ್ರಾಂಕ್ ಅಪಮೌಲ್ಯಗೊಳಿಸಬೇಕೆಂಬ ಅಂತರರಾಷ್ಟ್ರೀಯ ಒತ್ತಡಕ್ಕೆ ಫ್ರಾನ್ಸ್ ಮಣಿದಿದೆ ಎಂದು ಈ ವಲಯಗಳು ತಿಳಿಸಿವೆ.

ADVERTISEMENT

ಕಡ್ಡಾಯ ಮತದಾನ: ರಾಜ್ಯಸಭೆ ಟೀಕೆ

ನವದೆಹಲಿ, ನ. 22– ಮತದಾನ ಕಡ್ಡಾಯಗೊಳಿಸಬೇಕೆಂಬ ಪ್ರಧಾನ ಚುನಾವಣಾ ಕಮೀಷನರ್ ಎಸ್.ಪಿ. ಸೆನ್ ವರ್ಮ ಅವರ ಇತ್ತೀಚಿನ ಸಲಹೆ ಇಂದು ರಾಜ್ಯಸಭೆಯಲ್ಲಿ ತೀವ್ರ ಟೀಕೆಗೆ ಗುರಿಯಾಯಿತು.

ಕೇಂದ್ರ ಅಥವಾ ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸದೇ ಚುನಾವಣಾ ಕಮೀಷನರ್ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಲು ಹೇಗೆ ಸಾಧ್ಯ ಎಂದು ಎ.ಡಿ. ಮಣಿ ಅವರು ಪ್ರಶ್ನಿಸಿದರು.

ಚುನಾವಣಾ ಕಮೀಷನರ್ ಅವರ ಈ ಸಲಹೆಯಿಂದ ಪ್ರಜಾಪ್ರಭುತ್ವವನ್ನು ತಿರಸ್ಕರಿಸಿದಂತಾಗುತ್ತದೆ. ಸರ್ಕಾರ ಅವರನ್ನು ವಜಾ ಮಾಡಬೇಕು ಎಂದು ರಾಜ್‌ನಾರಾಯಣ್ ಹೇಳಿದರು.

ಮತದಾನ ಕಡ್ಡಾಯಗೊಳಿಸುವುದನ್ನು ಸರ್ಕಾರ ಪರಿಶೀಲಿಸುತ್ತಿಲ್ಲ ಮತ್ತು ಪ್ರಧಾನ ಚುನಾವಣಾ ಕಮೀಷನರ್ ಸರ್ಕಾರಕ್ಕೆ ಇಂಥ ಸಲಹೆ ಸಲ್ಲಿಸಿಲ್ಲವೆಂದು ಕಾನೂನು ಶಾಖೆ ಸಚಿವ ಪಿ. ಗೋವಿಂದ ಮೆನನ್ ತಿಳಿಸಿದರು.

2 ಕೋಟಿ ಗುಹ್ಯರೋಗಿಗಳ ರಾಷ್ಟ್ರೀಯ ಅಪಾಯ ಎದುರಿಸಲು ಎಚ್ಚರಿಕೆ

ಬೆಂಗಳೂರು, ನ. 22– ಭಾರತದ ಶೇಕಡಾ ನಾಲ್ಕರಷ್ಟು ಜನಸಂಖ್ಯೆಯನ್ನು ನಿತ್ಯ ದುಃಖಿಗಳಾಗಿಟ್ಟಿರುವ ಗುಹ್ಯರೋಗಿಗಳ ತೀವ್ರ ಪ್ರಮಾಣವನ್ನು, ರಾಷ್ಟ್ರದ ಪ್ರಮುಖ ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ತಂದ ಕೇಂದ್ರ ಆರೋಗ್ಯ ಸಚಿವ ಎಸ್. ಚಂದ್ರಶೇಖರ್ ಅವರು ‘ಇದನ್ನು ರಾಷ್ಟ್ರೀಯ ಆರೋಗ್ಯ ಅಪಾಯವೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.