ADVERTISEMENT

ಭಾನುವಾರ, 15–6–1969

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 19:45 IST
Last Updated 14 ಜೂನ್ 2019, 19:45 IST

ಹಳೇ ಮೈಸೂರಿಗೆ ‘ಅನ್ಯಾಯ’ ಕುರಿತು ಚರ್ಚೆಗೆ ನಕಾರ
ಮೈಸೂರು, ಜೂನ್ 14– ಹಳೆಯ ಮೈಸೂರಿಗೆ ಆಗಿರುವ ಅನ್ಯಾಯ, ಅಭಿವೃದ್ಧಿಯ ಬಗ್ಗೆ ಇರುವ ತಾರತಮ್ಯವನ್ನು ಅಭ್ಯಸಿಸಲು ಸಮಿತಿಯೊಂದನ್ನು ರಚಿಸಬೇಕೆಂಬ ಖಾಸಗಿ ನಿರ್ಣಯವೊಂದನ್ನು ಇಂದು ಇಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಕಾರ್ಯ ಸಮಿತಿ ತಿರಸ್ಕರಿಸಿದೆ.

ಈ ನಿರ್ಣಯದ ಸೂಚಕರಾದ ಸಂಸತ್ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪ ಅವರು ಸಭೆಯಲ್ಲಿ ಹಾಜರಿದ್ದು, ಸಮಿತಿಯನ್ನು ರಚಿಸಬೇಕೆಂದು ಒತ್ತಾಯ ಮಾಡಿದರು.

ಹಳೆಯ ಮೈಸೂರು ಅಭಿವೃದ್ಧಿ ಬಗ್ಗೆ ತಾರತಮ್ಯವಿದೆ ಎಂಬ ಮಾತು ಕೇಳಿಬಂದೊಡನೆ ಸರ್ಕಾರ ಈ ಬಗ್ಗೆ ಅಂಕಿ ಅಂಶ ಸಂಗ್ರಹಿಸುತ್ತಿದ್ದು, ಸಂಬಂಧಪಟ್ಟ ಇತರ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದರಿಂದ ಈ ನಿರ್ಣಯವನ್ನು ಎಂ.ಪಿ.ಸಿ.ಸಿ. ಮುಂದೆ ಮಂಡಿಸುವ ಅಗತ್ಯವಿಲ್ಲವೆಂದೂ, ಈ ವಿಷಯವನ್ನು ಕಾರ್ಯಸಮಿತಿಯ ಮಟ್ಟದಲ್ಲೇ ಚರ್ಚಿಸಬೇಕೆಂದು ಸಮಿತಿ ಅಭಿಪ್ರಾಯಪಟ್ಟಿತೆಂದೂ ತಿಳಿದುಬಂದಿದೆ.

ADVERTISEMENT

ಮಂಚನಬೆಲೆ ಯೋಜನೆ ವರ್ಷಾಂತ್ಯದೊಳಗೆ ಆರಂಭ
ಚನ್ನಪಟ್ಟಣ, ಜೂನ್ 14– ಬೆಂಗಳೂರು ಗ್ರಾಮಾಂತರ ಜಿಲ್ಲೆಯ 3 ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಿರುವ ಮಂಚನಬೆಲೆ ಯೋಜನೆಯ ಕಾರ್ಯವನ್ನು ವರ್ಷಾಂತ್ಯದೊಳಗೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಇಂದು ಇಲ್ಲಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.