ADVERTISEMENT

50 ವರ್ಷಗಳ ಹಿಂದೆ: ಶನಿವಾರ, 21–2–1970

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST

ಗಡಿ ಸಮಸ್ಯೆಗೆ ಪ್ರಧಾನಿ ಪರಿಹಾರ: ಶಹಪುರ ಮಹಾರಾಷ್ಟ್ರಕ್ಕೆ, ಬೆಳಗಾವಿ ಭಾಗ ರಾಜ್ಯದಲ್ಲೇ?
ಬೆಂಗಳೂರು, ಫೆ. 20: ಮೈಸೂರು ಹಾಗೂ ಮಹಾರಾಷ್ಟ್ರಗಳ ನಡುವೆ ಬೆಳಗಾವಿ ನಗರವನ್ನು ಭಾಗ ಮಾಡಿ ಹಂಚುವುದು ಪ್ರಧಾನಿ ಗಡಿ ವಿವಾದದ ಪರಿಹಾರಕ್ಕೆ ಸೂಚಿಸಿರುವ ಸಲಹೆ ಎಂದು ತಿಳಿದುಬಂದಿದೆ.

ಬೆಳಗಾವಿಯ ಭಾಗವಾದ ಶಹಪುರ ಮಹಾರಾಷ್ಟ್ರಕ್ಕೆ ಹೋಗುವುದೂ ಬೆಳಗಾವಿಯ ಬಹುಭಾಗ ಮೈಸೂರಿನಲ್ಲಿ ಉಳಿಯುವುದೂ ಈ ಸಲಹೆಯ ಸ್ವರೂಪವೆಂದು ಗೊತ್ತಾಗಿದೆ.

ಈ ಸೂಚನೆಯು ಪ್ರಧಾನಿ ಮಾಡಿರುವ ಸಲಹೆಗಳಲ್ಲಿ ಒಂದೆಂದೂ ಒಂದು ವರದಿ ತಿಳಿಸುತ್ತದೆ. ಪ್ರಧಾನಿ ಅವರ ಸಲಹೆಗಳೇನೆಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ.

ADVERTISEMENT

ಈಗಲೇ ತೀರ್ಪಿಲ್ಲ: ಸಂಧಾನಕ್ಕೆ ಆಧಾರ
ನವದೆಹಲಿ, ಫೆ. 20: ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಕುರಿತ ಕೇಂದ್ರದ ಸಲಹೆಗಳ ಸ್ವರೂಪವನ್ನು ತುಂಬಾ ರಹಸ್ಯವಾಗಿ ಇಡಲಾಗಿದೆ. ಆದರೆ ಅವು ಹಂಗಾಮಿ ಸಲಹೆಗಳು ಮಾತ್ರವೆಂದೂ ಸಂಧಾನಗಳ ಮೂಲಕ ಅವುಗಳನ್ನು ಮಾರ್ಪಡಿಸಬಹುದೆಂದೂ ಹೇಳಲಾಗಿದೆ.

ಸಾಮಾಜಿಕ ವ್ಯವಸ್ಥೆ ಸಾಧನೆಗೆ ಸರ್ಕಾರದ ದೃಢ ಸಂಕಲ್ಪ: ರಾಷ್ಟ್ರಪತಿ
ನವದೆಹಲಿ, ಫೆ. 20: ‘ನ್ಯಾಯವಾದ ಸಾಮಾಜಿಕ ವ್ಯವಸ್ಥೆ ಸಾಧನೆ ದಿಸೆಯಲ್ಲಿ ತ್ವರಿತಗತಿಯಿಂದ ಮುನ್ನಡೆಯಲು ಸರ್ಕಾರ ಸ್ಥಿರ ಸಂಕಲ್ಪ ಮಾಡಿದೆ’ ಎಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ತಿಳಿಸಿದರು.

ಇಂದು ಆರಂಭವಾದ ಮೂರು ತಿಂಗಳ ಕಾಲದ ಸಂಸತ್‌ ಬಜೆಟ್‌ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.