ADVERTISEMENT

50 ವರ್ಷಗಳ ಹಿಂದೆ: ಬುಧವಾರ 26.1.1972

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:30 IST
Last Updated 25 ಜನವರಿ 2022, 19:30 IST
   

ದ್ವೇಷ ಬಿಟ್ಟು, ಪರಸ್ಪರ ಏಳಿಗೆಗೆ ಸಹಕರಿಸಲು ಪಾಕಿಸ್ತಾನಕ್ಕೆ ಗಿರಿ ಕರೆ

ನವದೆಹಲಿ, ಜ. 25– ಭಾರತದ ಬಗ್ಗೆ ದ್ವೇಷಭಾವನೆ ತ್ಯಜಿಸಲು ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವವರಿಗೆ ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ರಾತ್ರಿ ಮನವಿ ಮಾಡಿಕೊಂಡರು.

‘ನಾವುಗಳು– ಭಾರತದ ಜನ,ಬಾಂಗ್ಲಾ ದೇಶದ ಜನ ಹಾಗೂ ಪಾಕಿಸ್ತಾನದ ಜನ, ಪರಸ್ಪರ ಮೈತ್ರಿ ಹಾಗೂ ಸಹಕಾರ ಬಾಂಧವ್ಯವಿಟ್ಟುಕೊಂಡು ನಮ್ಮೆಲ್ಲಜನತೆಯ ಒಟ್ಟಾರೆ ಕಲ್ಯಾಣ ಹಾಗೂ ವಿಶ್ವದಾದ್ಯಂತ ಶಾಂತಿ ಮತ್ತು ಮಾನವೀಯ ಸ್ವಾತಂತ್ರ್ಯ ಸಾಧನೆಗೆ ಶ್ರಮಿಸುವಂತಾಗುವ ದಿನವನ್ನು ಎದುರು ನೋಡೋಣ’ ಎಂದು ಅವರು ಗಣರಾಜ್ಯೋತ್ಸವ ಮುನ್ನಾದಿನ
ಆಕಾಶವಾಣಿಯಲ್ಲಿ ಪ್ರಸಾರ ಮಾಡುತ್ತ ನುಡಿದರು.

ADVERTISEMENT

ರಾಷ್ಟ್ರಪತಿಗೆ ‘ಕ್ಷಮೆ ಕೋರಿ’ರಾಜ್ಯಪಾಲರ ಪತ್ರ

ಬೆಂಗಳೂರು, ಜ. 25– ಕೇಂದ್ರದ ಆರ್ಥಿಕ ನೆರವಿನ ಖೋತಾ ಬಗ್ಗೆ ತಾವು ನೀಡಿದ್ದ ಹೇಳಿಕೆಯಿಂದ ಉಂಟಾಗಿರುವ ತಪ್ಪು ತಿಳಿವಳಿಕೆಯನ್ನು ನಿವಾರಿಸಲು ರಾಜ್ಯಪಾಲರು, ‘ಸಂವಿಧಾನಾತ್ಮಕ ಅನೌಚಿತ್ಯವೆಂದು ಹೇಳಲು ಅವಕಾಶ ನೀಡಬಹುದಾದಂತ ಮಾತನ್ನು ಆಡಿದುದಕ್ಕೆ ಕ್ಷಮೆ ಕೋರಿ’ ರಾಷ್ಟ್ರಪತಿಗೆ ಪತ್ರಬರೆದಿದ್ದಾರೆ.

ಕೇಂದ್ರ ಸರ್ಕಾರದ ನೆರವು ಖೋತಾ ಆದ ಬಗ್ಗೆ ರಾಜ್ಯಪಾಲರು ನೀಡಿದ ಪ್ರತಿಕ್ರಿಯೆ ಕೇಂದ್ರ ಸರ್ಕಾರವನ್ನು ಅಸಾಮಾಧಾನ
ಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.