ADVERTISEMENT

50 ವರ್ಷಗಳ ಹಿಂದೆ | ಭಾನುವಾರ, 12-7-1970

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 19:32 IST
Last Updated 11 ಜುಲೈ 2020, 19:32 IST

ಕೋಲ್ಕತ್ತ ವಿಶ್ವವಿದ್ಯಾನಿಲಯ, ರೈಲ್ವೆ ಕೇಂದ್ರಕ್ಕೆ ಮುತ್ತಿಗೆ: ಅಪಾರ ಹಾನಿ

ಕೋಲ್ಕತ್ತ, ಜು.11– ನಕ್ಸಲೀಯರು ಮತ್ತು ಪ್ರೀಮೆಡಿಕಲ್‌ ವಿದ್ಯಾರ್ಥಿಗಳು ಇಂದು ಕೋಲ್ಕತ್ತ ವಿಶ್ವವಿದ್ಯಾಲಕ್ಕೆ ನುಗ್ಗಿ ಉಪಕುಲಪತಿ ಮತ್ತು ಪರೀಕ್ಷೆ ನಿಯಂತ್ರಣಾಧಿಕಾರಿಯ ಕಚೇರಿಗಳಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರಲ್ಲದೆ ಮೇಜು ಕುರ್ಚಿಗಳನ್ನು ಮುರಿದು ಬೆಂಕಿಗಿಟ್ಟರು.

ನಕ್ಸಲೀಯ ದಾಳಿಯಿಂದ ವಿಶ್ವವಿದ್ಯಾನಿಲಯದ ಆಸ್ತಿ ಪಾಸ್ತಿಗೆ ವಿಪರೀತ ನಷ್ಟವಾಗಿದೆಯೆಂದು ಹೇಳಲಾಗಿದೆ.

ADVERTISEMENT

ಪೊಲೀಸ್‌ ಗುಂಡಿಗೆ ಆಂಧ್ರದ ಇಬ್ಬರು ಮುಖ್ಯ ನಕ್ಸಲೀಯ ನಾಯಕರು ಆಹುತಿ

ಹೈದರಾಬಾದ್‌, ಜು.11– ಆಂಧ್ರ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಜನಕ ವೆಂಪಟಪು ಸತ್ಯನಾರಾಯಣ ಮತ್ತು ಇನ್ನೊಬ್ಬ ಹಿರಿಯ ನಕ್ಸಲೀಯ ನಾಯಕ ಅಡಿ ಬಾಟ್ಲ ಕೈಲಾಸಂ ಎಂಬಿಬ್ಬರನ್ನು ಬೋರಿ ಗುಡ್ಡ ಗಾಡಿನಲ್ಲಿ ಶುಕ್ರವಾರ ಪೊಲೀಸರು ಗುಂಡಿಕ್ಕಿ ಕೊಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.