ADVERTISEMENT

25 ವರ್ಷಗಳ ಹಿಂದೆ: ಶನಿವಾರ, 28–11–1970

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:30 IST
Last Updated 27 ನವೆಂಬರ್ 2020, 19:30 IST
   

ಗಡಿ ಪ್ರಶ್ನೆ: ಸಂಸತ್‌ ಸಮಿತಿಗೆಒಪ್ಪಿಸುವ ಸಲಹೆಗೆ ವಿರೋಧ
ಬೆಂಗಳೂರು, ನ. 27:
ಮಹಾಜನ್‌ ತೀರ್ಪನ್ನು ಸಂಸತ್ತಿನ ಸಮಿತಿಗೆ ಕೇಂದ್ರ ಸರ್ಕಾರ ಒಪ್ಪಿಸುವುದನ್ನು ಕನ್ನಡ ಸಾಹಿತ್ಯ ಪರಿಷತ್‌ ವಿರೋಧಿಸಿದೆ.

ಈ ಸಲಹೆಯನ್ನು ‘ಪ್ರತೀ ಕನ್ನಡಿಗನೂ ವಿರೋಧಿಸುವನು’ ಎಂದು ಇಂದು ವರದಿಗಾರರಿಗೆ ತಿಳಿಸಿದ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರು, ‘ಮೈಸೂರು– ಮಹಾರಾಷ್ಟ್ರ ಗಡಿ ಪರಿಹಾರಕ್ಕೆ ಮಹಾಜನ್‌ ತೀರ್ಪನ್ನು ಜಾರಿಗೆ ಕೊಡುವುದೊಂದೇ ಸೂಕ್ತ ಮಾರ್ಗ’ ಎಂದು ಒತ್ತಿ ಹೇಳಿದರು.

ಕಾವೇರಿ ವಿವಾದದ ಸಂಬಂಧದಲ್ಲೂ ಪರಿಷತ್ತು ರಾಜ್ಯ ಸರ್ಕಾರದ ನಿಲುವಿಗೆ ಬೆಂಬಲ ನೀಡುವುದೆಂದು ತಿಳಿಸಿದರು.

ADVERTISEMENT

ಸಂಪೂರ್ಣ ಸ್ವದೇಶಿ ಕಾರುರಾಜ್ಯದ ಹೊಸ ಯೋಜನೆ
ಬೆಂಗಳೂರು, ನ. 27:
ಪೂರ್ಣವಾಗಿ ದೇಶೀಯ ಬಿಡಿ ಭಾಗಗಳನ್ನೇ ಜೋಡಿಸಿ ಕಾರು ತಯಾರಿಸುವ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಸದ್ಯದಲ್ಲೇ ಕೇಂದ್ರಕ್ಕೆ ಸಲ್ಲಿಸಲಿದೆ.

ರಾಜ್ಯದ ಕೈಗಾರಿಕೆ ಬಂಡವಾಳ ಹಾಗೂ ಅಭಿವೃದ್ಧಿ ಕಾರ್ಪೊರೇಷನ್‌ ಈ ಸಂಬಂಧದಲ್ಲಿ ಸೂಕ್ತ ತಿದ್ದುಪಡಿಗಳೊಡನೆ ಯೋಜನೆಯೊಂದನ್ನು ರೂಪಿಸುತ್ತಿದೆ.

ಜಪಾನಿನ ಸಹಾಯದೊಡನೆ ಕಾರು ತಯಾರಿಕೆ ಯೋಜನೆಯೊಂದನ್ನು ರಾಜ್ಯ ಈ ಹಿಂದೆ ಕೇಂದ್ರಕ್ಕೆ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.