ADVERTISEMENT

ಮಂಗಳವಾರ, 15–4–1969

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:15 IST
Last Updated 14 ಏಪ್ರಿಲ್ 2019, 20:15 IST

ಸಣ್ಣ ಹಿಡುವಳಿದಾರರಿಗೆ ಕಂದಾಯ ರದ್ದು ಇಲ್ಲ: ಸಚಿವ ಕೌಜಲಗಿ ಸ್ಪಷ್ಟನೆ
ಬೆಂಗಳೂರು, ಏ. 14– ಸಣ್ಣ ಹಿಡುವಳಿದಾರರಿಗೆ ಕಂದಾಯ ರದ್ದು ಮಾಡಬೇಕೆಂಬ ಬೇಡಿಕೆಯನ್ನು ಕಂದಾಯ ಸಚಿವ ಶ್ರೀ ಎಚ್.ವಿ. ಕೌಜಲಗಿ ಅವರು ಇಂದು ಮೇಲ್ಮನೆಯಲ್ಲಿ ನಿರಾಕರಿಸಿದರು.

ಲೋಕಸಭೆಯಲ್ಲಿ ಗೋಲ್ವಾಲ್ಕರ್ ಬಗ್ಗೆ ಸದಸ್ಯರ ಬಣ್ಣನೆ: ಜನಸಂಘ ಮತ್ತು ಕಾಂಗ್ರೆಸ್ ನಡುವೆ ಚಕಮಕಿ
ನವದೆಹಲಿ, ಏ. 14– ಪುರಿ ಜಗದ್ಗುರು ಶಂಕರಾಚಾರ್ಯ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಗೋಲ್ವಾಲ್ಕರ್ ಅವರು ವರ್ಣಾಶ್ರಮ ಪದ್ಧತಿಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಇಂದು ಲೋಕಸಭೆಯಲ್ಲಿ ಜನಸಂಘ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಯಿತು.

ಸಮಾಜ ಕಲ್ಯಾಣದ ಕೇಂದ್ರ ಇಲಾಖೆ ಬೇಡಿಕೆಗಳ ಬಗ್ಗೆ ಅಪೂರ್ಣವಾಗಿ ಚರ್ಚೆ ನಡೆಸಿದ ಲೋಕಸಭೆಯಲ್ಲಿ ಸುಮಾರು ಒಂದು ಗಂಟೆ ಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು.

ADVERTISEMENT

ಜನವರಿ 1ರಿಂದ ಸಿಮೆಂಟ್ ಹತೋಟಿ ಸಂಪೂರ್ಣ ರದ್ದು
ನವದೆಹಲಿ, ಏ. 14– ಸಿಮೆಂಟ್ ಬೆಲೆ ಮತ್ತು ಹಂಚಿಕೆ ಮೇಲಿನ ಎಲ್ಲಾ ಹತೋಟಿಯನ್ನೂ ಮುಂದಿನ ವರ್ಷ ಜನವರಿ ಒಂದನೇ ತಾರೀಖಿನಿಂದ ರದ್ದುಪಡಿಸುವುದಾಗಿ ಕೈಗಾರಿಕಾಭಿವೃದ್ಧಿ ಮತ್ತು ಕಂಪನಿ ವ್ಯವಹಾರಗಳ ಸಚಿವ ಫಕ್ರುದ್ದೀನ್ ಆಲಿ ಅಹಮದ್ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.