ADVERTISEMENT

ಶುಕ್ರವಾರ, 27–6–1969

ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:00 IST
Last Updated 26 ಜೂನ್ 2019, 19:00 IST

ಹೈದರಾಬಾದಿನಲ್ಲಿ ಮತ್ತೆ ಗೋಲಿಬಾರ್; ಒಂದು ಸಾವು

ಹೈದರಾಬಾದ್, ಜೂನ್ 26– ಗೌಳಿಗುಡ ಪ್ರದೇಶದಲ್ಲಿ ಕಲ್ಲೆಸೆತದಲ್ಲಿ ತೊಡಗಿದ್ದ ತೆಲಂಗಾಣ ಚಳವಳಿಕಾರರ ವಿರುದ್ಧ ಪೊಲೀಸರು ಇಂದು ಸಂಜೆ ಗೋಲಿಬಾರ್ ಮಾಡಿದಾಗ ಒಬ್ಬನು ಸತ್ತನು.

18 ವರ್ಷ ವಯಸ್ಸಿನ ಒಬ್ಬ ಕಾಲೇಜ್ ವಿದ್ಯಾರ್ಥಿಯು ಗೋಲಿಬಾರಿನಿಂದ ಗಾಯಗೊಂಡು ಆಸ್ಪತ್ರೆಗೆ ಸೇರಿಸಲ್ಪಟ್ಟನು. ಅವನಿಗೆ ಪ್ರಾಣಾಪಾಯವಿಲ್ಲವೆಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಭಾಷಾ ಪತ್ರಿಕೆ ಸಂಘಕ್ಕೆ ಭಟ್, ನೆಟ್ಟಕಲ್ಲಪ್ಪ ಅವರ ಪುನರಾಯ್ಕೆ

ಮುಂಬೈ, ಜೂನ್ 26– ಪುಣೆಯ ‘ಸಂಪದ’ ಪತ್ರಿಕೆಯ ಶ್ರೀ ಎ.ಆರ್. ಭಟ್ ಅವರು ಭಾರತೀಯ ಭಾಷಾ ವೃತ್ತಪತ್ರಿಕೆಗಳ ಸಂಘದ ಅಧ್ಯಕ್ಷರಾಗಿ ಇಂದು ಪುನಃ ಆಯ್ಕೆಯಾದರು.

‘ಪ್ರಜಾವಾಣಿ’ ಪತ್ರಿಕೆಯ ಶ್ರೀ ಕೆ.ಎ. ನೆಟ್ಟಕಲ್ಲಪ್ಪ ಅವರು ಒಬ್ಬ ಉಪಾಧ್ಯಕ್ಷರಾಗಿ ಮತ್ತೆ ಚುನಾಯಿತರಾಗಿದ್ದಾರೆ. ಸಂಘಕ್ಕೆ ಏಳು ಉಪಾಧ್ಯಕ್ಷರಿದ್ದಾರೆ.

ಕಾಶ್ಮೀರದಲ್ಲಿ ರಸ್ತೆ ನಿರ್ಮಾಣ: ಚೀನ, ಪಾಕಿಸ್ತಾನಕ್ಕೆ ಭಾರತದ ಪ್ರತಿಭಟನೆ

ನವದೆಹಲಿ, ಜೂನ್ 26– ಕಾಶ್ಮೀರ– ಸಿಂಕಿಯಾಂಗ್ ಗಡಿಯಲ್ಲಿ ಉತ್ತರ ಕಾಶ್ಮೀರದ ಮೊರ್ಬಂ ಮತ್ತು ಖುಂಜರಾಬ್‌ ಕಣಿವೆ ನಡುವೆ ಇತ್ತೀಚೆಗೆ ಹೊಸ ರಸ್ತೆ ನಿರ್ಮಾಣವಾಗಿರುವ ಬಗ್ಗೆ ಭಾರತವು ಪಾಕಿಸ್ತಾನ ಮತ್ತು ಚೀನಕ್ಕೆ ಪ್ರತಿಭಟನೆ ಸಲ್ಲಿಸಿದೆ.

ಉಭಯ ದೇಶಗಳ ಸರ್ಕಾರಕ್ಕೆ ನಿನ್ನೆ ಸಲ್ಲಿಸಿದ ಪ್ರತಿಭಟನಾ ಪತ್ರದಲ್ಲಿ ‘ಕಾಶ್ಮೀರವು ಕಾನೂನುಬದ್ಧವಾಗಿ ಭಾರತದ ಅವಿಭಾಜ್ಯ ಭಾಗ. ಆದ್ದರಿಂದ ಈ ವಿಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಚೀನ ಮತ್ತ ಪಾಕಿಸ್ತಾನಕ್ಕೆ ಅಧಿಕಾರವೇ ಇಲ್ಲ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.